ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದಿಂದ ಹೊಸ ರೂಲ್ಸ್ ➤ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.28., ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಕೂಡ ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.


ಹೌದು ದ್ವಿಚಕ್ರ ವಾಹನ ಸವಾರರು ಓದಲೇಬೇಕಾದ ಸುದ್ದಿ ಇದು. ಟೂ ವಿಲ್ಹರ್ ಗಳಿಗಾಗಿಯೇ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ.


ಇನ್ಮುಂದೆ ಬೈಕ್‌ ನ ಹಿಂಬದಿ ಸವಾರರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಹ್ಯಾಂಡ್‌ಹೋಲ್ಡ್‌ ಕಡ್ಡಾಯವಾಗಿದ್ದು, ಸೀರೆ ಗಾರ್ಡ್‌ ಜತೆಗೆ ಹ್ಯಾಂಡ್‌ಹೋಲ್ಡ್‌, ಫುಟ್‌ರೆಸ್ಟ್‌ ಕಡ್ಡಾಯ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ನಿಯಮ ಜಾರಿ ಮಾಡಿದೆ.

Also Read  ಕಡಬದ ಯುವಕ ಮಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಕೇಂದ್ರ ಮೋಟಾರು ವಾಹನ ನಿಯಮಕ್ಕೆ ಕೆಲ ಮಾರ್ಪಾಡು ಮಾಡಲಾಗಿದ್ದು, ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲಾಗಿದೆ.

ದ್ವಿಚಕ್ರ ವಾಹನದ ಹೊಸ ಮಾರ್ಗಸೂಚಿಯಂತೆ ಬೈಕ್ ನ ಎರಡೂ ಬದಿಗಳಲ್ಲಿ ಪಿಲಿಯನ್ ಸವಾರರಿಗೆ ಫುಟ್‌ರೆಸ್ಟ್‌ ಇರಬೇಕು. ಹಿಂಬದಿ ಸವಾರರ ಬಟ್ಟೆ ಸಿಕ್ಕಿಹಾಕಿಕೊಳ್ಳದಂತೆ ಅಗತ್ಯ ಕ್ರಮ ವಹಿಸಬೇಕು.

error: Content is protected !!
Scroll to Top