ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ➤ ತುಮಕೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯ ವಿನೂತನ ಪ್ರಯೋಗ

(ನ್ಯೂಸ್ ಕಡಬ) newskadaba.com ತುಮಕೂರು, ಜು.28:ತುಮಕೂರು ಜಿಲ್ಲೆಗೆ ಕಲ್ಪತರು ನಾಡು ಎಂದೇ ಖ್ಯಾತಿ ಇದೆ. ಎಸ್‌ಐಟಿಯಲ್ಲಿ ಜೈವಿಕ ತಂತ್ರಜ್ಞಾನ ವ್ಯಾಸಂಗ ಪೂರ್ಣಗೊಳಿಸಿರುವ ಚಿದಾನಂದ್, ಕಡಿಮೆ ವೆಚ್ಚದಲ್ಲಿ ಸೋಂಕು ನಿವಾರಕ ಸುರಂಗಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸರ್ ರೂಪಿಸಿದ್ದಾರೆ.

 

 

ಈ ಸ್ಯಾನಿಟೈಸರ್‌ಗೆ ‘ಕಲ್ಪಶುದ್ಧಿ’ ಎನ್ನುವ ಹೆಸರು ಇಟ್ಟಿದ್ದಾರೆ. ಮಾರುಕಟ್ಟೆಗೆ ಬಿಡುಗಡೆಗೊಳಿಸುವ ದಿಕ್ಕಿನಲ್ಲಿ ಅಡಿ ಇಟ್ಟಿದ್ದು, ಅನುಮತಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಪೇಟೆಂಟ್ ಪಡೆಯುವ ದಿಕ್ಕಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳಲ್ಲೂ ತೊಡಗಿದ್ದಾರೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆ್ಯಸಿಡ್ ಅಂಶ ಇರುತ್ತದೆ. ಇದು ಕೊರೋನಾ ವೈರಸ್​ನ ಮೇಲ್ಪದರಗಳನ್ನ (ಲಿಪಿಡ್ ಬೈಲೇಯರ್) ನಾಶಗೊಳಿಸುತ್ತದೆ. ಸಾಮಾನ್ಯವಾಗಿ ಕೊರೊನಾ ಸೇರಿದಂತೆ ಬಹುತೇಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಲ್ಲಿ ರಕ್ಷಾ ಕವಚದಂತೆ ಲಿಪಿಡ್ ಲೆಯರ್ ಇರುತ್ತದೆ. ಕೊರೋನಾ ವೈರಸ್​ನಲ್ಲೂ ಈ ಲಿಪಿಡ್ ಲೆಯರ್ ಇದೆ. ಇದನ್ನು ಲಾರಿಕ್ ಆ್ಯಸಿಡ್ ನಾಶ ಮಾಡುತ್ತದೆಯಂತೆ. ತೆಂಗಿನ ಎಣ್ಣೆಗೆ ಶೇ 70ರಷ್ಟು ಆಲ್ಕೊಹಾಲ್ ಮತ್ತು ಲೆಮನ್ ಆಯಿಲ್ ಸೇರಿಸಿ ಸ್ಯಾನಿಟೈಸರ್ ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಆಯುಷ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಯುತ್ತಿದೆ. ಅವರು ಇದನ್ನು ಸಂಶೋಧನೆಗೂ ಒಳಪಡಿಸಬಹುದು. ಆ ಪ್ರಕ್ರಿಯೆಗಳು ಮುಗಿದ ಮೇಲೆ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ ಚಿದಾನಂದ್. ಸರ್ಕಾರ ನಿಗದಿಪಡಿಸಿರುವ 100 ಎಂಎಲ್ ಸ್ಯಾನಿಟೈಸರ್‌ಗೆ 50 ರೂ ನಂತೆ ದರ ನಿಗದಿಪಡಿಸಲಾಗಿದೆ.

Also Read  ತನ್ನ ಅಪ್ರಾಪ್ತೆ ಶಿಷ್ಯೆಯನ್ನೇ ಅತ್ಯಾಚಾರಗೈದ ಕಾಮುಕ ಶಿಕ್ಷಕ ➤ ಪೋಕ್ಸೋ ಕಾಯ್ದೆಯಡಿ ಬಂಧನ

 

 

 

error: Content is protected !!
Scroll to Top