ಕೊರೋನಾ ಆರ್ಭಟ ನಡುವೆ ಭರ್ಜರಿ ಕೃಷಿ ➤ ದ. ಕನ್ನಡದಲ್ಲಿ ಏರಿಕೆ ಕಂಡ ಭತ್ತದ ಕೃಷಿ

(ನ್ಯೂಸ್ ಕಡಬ) newskadaba.com ದ. ಕನ್ನಡ, ಜು.28:  ಹಲವು ವರ್ಷಗಳ ಕಾಲ ಹಡೀಲು ಬಿದ್ದಿದ್ದ ಭತ್ತದ ಗದ್ದೆಗಳಲ್ಲಿ ಮತ್ತೆ ನಾಟಿ ಕಾರ್ಯ ಆರಂಭಗೊಂಡಿದೆ. ತಮ್ಮ ತಮ್ಮ ಮನೆಗಾಗುವಷ್ಟು ಭತ್ತ ಹಾಗೂ ತರಕಾರಿಗಳನ್ನು ಬೆಳೆಯುವ ಮೂಲಕ ಆಹಾರದಲ್ಲೂ ಸ್ವಾವಲಂಭನೆ ಸಾಧಿಸುವ ಪ್ರಕ್ರಿಯೆಗೆ ಚಾಲನೆಯೂ ದೊರತಿದೆ.ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಬಳಿಕ ಜನರ ಜೀವನದಲ್ಲಿ ಹಲವು ಬದಲಾವಣೆಗಳು ಕಂಡು ಬಂದಿದೆ. ವ್ಯವಹಾರ ಕ್ಷೇತ್ರಗಳು ಕೊರೋನಾ ಬಳಿಕ ನಷ್ಟದ ಹಾದಿಯಲ್ಲಿದ್ದರೆ, ಕೃಷಿ ಚಟುವಟಿಕೆಗಳು ಮತ್ತೆ ಪುಟಿದೇಳಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಭತ್ತದ ಕೃಷಿ ಮಾಡದೆ , ಅಕ್ಕಿಯನ್ನು ಮಾರುಕಟ್ಟೆಗಳಿಂದ ಖರೀದಿಸುತ್ತಿದ ಜನ ಇದೀಗ ತಮ್ಮ ತಮ್ಮ ಮನೆಯಲ್ಲೇ ಭತ್ತದ ನಾಟಿ ಆರಂಭಿಸಿದ್ದಾರೆ.

Also Read  ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಕೊನೆಯ ಅವಕಾಶ

 

 

 

 

ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೂರೈಕೆಯಲ್ಲಿ ವ್ಯತ್ಯಯ, ಮಾರುಕಟ್ಟೆಗೆ ಹೋಗಲಾಗದ ಪರಿಸ್ಥಿತಿಯನ್ನು ಎದುರಿಸಿದ್ದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮಗಳ ಜನ ಇದೀಗ ತಮ್ಮ ಮನೆಯಲ್ಲೇ ಭತ್ತ ಹಾಗೂ ತರಕಾರಿಯನ್ನು ಬೆಳೆಯಲಾರಂಭಿಸಿದ್ದಾರೆ. ಗದ್ದೆ ಇಲ್ಲದೇ ಹೋದಲ್ಲಿ ಜಮೀನಿನಲ್ಲಿರುವ ಖಾಲಿ ಜಾಗವನ್ನು ಸಮತಟ್ಟುಗೊಳಿಸಿ ಗದ್ದೆ ನಿರ್ಮಾಣ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಉದ್ಯಮ, ವ್ಯವಹಾರಗಳ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೊರೋನಾ ಪರಿಣಾಮ ಸಕಾರಾತ್ಮಕವಾಗಿ ಮೂಡಿ ಬಂದಿದೆ.

 

 

 

 

error: Content is protected !!
Scroll to Top