ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ

(ನ್ಯೂಸ್ ಕಡಬ) newskadaba.com ಕಮಿಲ, ಜು.27:  ಕೊರೋನಾ ಹಾವಳಿಯಿಂದ ಬೆಂದುಹೋಗಿರುವ ಕರಾವಳಿಯಲ್ಲಿ ಸಂಡೇ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಸಂಡೇ ಲಾಕ್ ಡೌನ್ ಯಶಸ್ವಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಡೇ ಲಾಕ್ ಡೌನ್ ನನ್ನ ಯುವಕರ ತಂಡವೊಂದು ಸದುಪಯೋಗ ಪಡಿಸಿಕೊಂಡು ಪ್ರಶಂಷೆ ಗೆ ಪಾತ್ರರಾಗುವ ಮೂಲಕ ಉತ್ತಮ ಸಂದೇಶವನ್ನ ನೀಡಿದ್ದಾರೆ.

 

 

 

 

ಹೌದು, ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಪರಿಸರವು ಕುಡುಕರ ಹಾವಳಿಯಿಂದ ದುರ್ಣತ ಬೀರುತ್ತ ಅಸಹ್ಯವೆನಿಸುವ ಸ್ಥಿತಿಯಿಂದ ಕೂಡಿತ್ತು. ಎಲ್ಲಂದರಲ್ಲಿ ಬಿಯರ್ ಬಾಟಲ್ ಗಳು, ಕಸದರಾಶಿಗಳು, ಗೋಡೆ ತುಂಬ ಕಾಣುತ್ತಿದ್ದ ಕೆಟ್ಟ ಬರಹಗಳು, ಇದನ್ನ ಮನಗಂಡ ‘ಕುಲದೇವತಾ ಪ್ರಗತಿ ಬಂಧು ಸಂಘ’ದ ಸದಸ್ಯರು ಸಂಪೂರ್ಣವಾಗಿ ಸ್ಪಚ್ಚಗೊಳಿಸಿದ್ದು, ಸುಣ್ಣ ಬಳಿದು ಹೊಸ ರೂಪವನ್ನ ಕೊಟ್ಟಿದ್ದಾರೆ. “ ಇನ್ನಾದರೂ ಕಿಡಿಗೇಡಿಗಳು ಇನ್ನೊಂದು ಹೆಣ್ಣುಮಗಳ ಬಗ್ಗೆ ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ಬರೆಯುವ ಮುನ್ನ ನಿಮ್ಮ ಮನೆಯ ಅಕ್ಕ , ತಂಗಿ ಅಥವಾ ನಿಮ್ಮ ಅಮ್ಮನನ್ನು ನೆನಪು ಮಾಡಿಕೊಳ್ಳಿ, ಅಥವಾ ನಿಮ್ಮ ಮನೆಯ ಗೋಡೆಯ ಮೇಲೆ ಬರೆದುನೋಡಿ’’ ಎಂದು ಹೇಳುವ ಮೂಲಕ ಸ್ಪಚ್ಚ ಸಂದೇಶದ ಗೌರವದ ಜೊತೆಗೆ ಕಿಡಿಗೇಡಿಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಸಂಘದ ಸದಸ್ಯರಾದ ಲೋಕೇಶ್ ಕಮಿಲ, ಪೂವಪ್ಪ ಪೂಜಾರಿ, ವೆಂಕಪ್ಪ ಪೂಜಾರಿ, ಲಿತಿನ್ , ಅನಿಲ್ ಹಾಗೂ ನಿಖಿಲ್ ಕೈ ಜೋಡಿಸಿದ್ದಾರೆ.

Also Read  ವಿಧಾನಪರಿಷತ್ ಚುನಾವಣೆ ➤ ಎಸ್ಡಿಪಿಐ ಅಭ್ಯರ್ಥಿಯಿಂದ ಬೆಳ್ತಂಗಡಿಯಲ್ಲಿ ಸಭೆ

 

 

error: Content is protected !!
Scroll to Top