(ನ್ಯೂಸ್ ಕಡಬ) newskadaba.com ಬಿಳಿನೆಲೆ, ಜು.27: ಭಾನುವಾರ ಕರ್ನಾಟಕದ್ಯಾಂತ ಲಾಕ್ ಡೌನ್ ಇದ್ದರೂ ಜನರು ಅಲ್ಲಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದರಂತೆ ಕಳೆದ ದಿನ ಲಾಕ್ ಡೌನ್ ಉಲ್ಲಂಘಿಸಿ ಬಿಳಿನೆಲೆಯಲ್ಲಿ ಕೆಲವರು ಬೀದಿಯಲ್ಲಿ ಕಿತ್ತಾಟ ಮಾಡಿದ್ದಾರೆ.
ಬಿಳಿನೆಲೆ ಪೇಟೆಯಲ್ಲಿ ಅಂಗಡಿಯೊಂದರ ಸಮೀಪ, ಇನ್ನೊಂದು ಅಂಗಡಿ ನಿರ್ಮಿಸಲು ಶೆಡ್ ನಿರ್ಮಾಣವಾಗಿದ್ದು, ಇದನ್ನ ವಿರೋಧಿಸಿದ ಅಂಗಡಿ ಮಾಲಕಿ ಹಾಗೂ ಅವರ ಪುತ್ರನ ಮೇಲೆ ಐವರು ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲಕಿ ಅನ್ನಪೂರ್ಣ (ಸೀತಮ್ಮ) ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕಳೆದ ದಿನ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಅಂಗಡಿ ಮಾಲಕಿ ಅನ್ನಪೂರ್ಣ ಅವರು ಹೇಳಿಕೆ ನೀಡಿದ್ದು “ನಾವು ಕಳೆದ 30 ವರ್ಷಗಳಿಂದ ಅಂಗಡಿ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯ ಹಿಂದುಗಡೆ ನಮ್ಮ ಸ್ವಾಧಿನ ಇರುವ ಜಾಗದಲ್ಲಿ ಮಾಜಿ. ತಾ.ಪಂ ಸದಸ್ಯೆ ಸರೋಜಿನಿ ಜಯಪ್ರಕಾಶ್ ರವರ ಕುಮ್ಮಕ್ಕಿನಿಂದ ಪ್ರಕಾಶ್, ಸಂದೀಪ್ , ಪ್ರೀತಮ್, ಕಾರ್ತಿಕ್ ದಯಾನಂದ ಸೇರಿದಂತೆ ಇತರರು ಶೆಡ್ ನಿರ್ಮಿಸಿದ್ದು ಅಲ್ಲದೆ, ಆ ಜಾಗದಲ್ಲಿದ್ದ ಕೊಕ್ಕೊ ಗಿಡ, ತೆಂಗಿನ ಸಸಿ, ಟಿವಿ ಡಿಶ್ ಸೇರಿದಂತೆ ಮೊದಲಾದ ವಸ್ತುಗಳನ್ನ ಹಾನಿಗೊಳಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ದೂರು ನೀಡಿದ್ದಾರೆ. ಇನ್ನು ಇವರ ಪುತ್ರ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪರಿಸ್ಥಿಯಂತೆ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಇತ್ತಂಡಗಳ ವಿರುದ್ಧವೂ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.