ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟು ಬಂದ್ ➤ ವಾಹನ ಸಂಚಾರವೂ ವಿರಳ

(ನ್ಯೂಸ್ ಕಡಬ) newskadaba.com ಉಡುಪಿ, ಜು.27: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ನ ನಾಲ್ಕನೇ ಭಾನುವಾರವೂ ನಗರ, ಗ್ರಾಮೀಣ ಪ್ರದೇಶಗಳು ಸ್ತಬ್ಧವಾಗಿದ್ದವು. ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್, ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ಕೆಲವು ಮೆಡಿಕಲ್ ಶಾಪ್‌ಗಳೂ ಬಂದ್ ಮಾಡಿದ್ದವು.

 

 

ಹಾಲಿನ ಅಂಗಡಿಗಳು ಬೆಳಗ್ಗೆ 11ರವರೆಗೆ ತೆರೆದಿದ್ದವು. ಕೆಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಲಾಗುತ್ತಿತ್ತು. ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ವ್ಯಾಪಾರ ವಹಿವಾಟು, ವಾಹನ, ಜನರ ಓಡಾಟ ಇರಲಿಲ್ಲ. ನಗರದ ಕಲ್ಸಂಕ ವೃತ್ತದಲ್ಲಿ ಸಂಚಾರಿ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಗಡಿ ತಪಾಸಣಾ ಕೇಂದ್ರದಲ್ಲಿ ಅನಗತ್ಯ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ಹಿಂದಕ್ಕೆ ಕಳುಹಿಸಿದರು. ವಾಹನಗಳ ಸಂಚಾರವಿಲ್ಲದೆ ಹೆಜಮಾಡಿ ಟೋಲ್ ಪ್ಲಾಜಾ ಬಿಕೋ ಅನ್ನುತ್ತಿತ್ತು.

 

Also Read  ಕೋವಿಡ್‌ಗೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ವಿಧಿವಶ

 

error: Content is protected !!
Scroll to Top