ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆ ➤ ಖಾಲಿ ಜಾಗದಲ್ಲಿ ಭತ್ತ ನಾಟಿ ಮಾಡಿದ ಕುಸುಮಧರ್ ಕಾಂತಿಲ

(ನ್ಯೂಸ್ ಕಡಬ) newskadaba.com ಕಮಿಲ , ಜು.26: ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ.

 

ಭಿನ್ನ ಆಲೋಚನೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಯಾವುದೇ ಕಾರ್ಯ ಯಶಸ್ಸಾಗುವುದು ನಿಶ್ಚಿತ. ಹೀಗೆ ವಿಭಿನ್ನವಾಗಿ ಯೋಚಿಸಿ ಹುಟ್ಟು ಕೃಷಿ ಚಟುವಟಿಕೆಯಲ್ಲಿ ಮುಂದಾಗಿದ್ದಾರೆ. ಹೌದು, ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಮಿಲ ಎಂಬ ಪುಟ್ಟ ಊರಿನವರು. ಸ್ವಾವಲಂಬಿ ಭಾರತ ನಿರ್ಭರ ಭಾರತ ಕಟ್ಟೋನಾ ಎಂಬ ಈ ಮಾತಿಗೆ ಪೂರಕವಾಗಿ ಕಮಿಲ ಎಂಬ ಪುಟ್ಟ ಊರಿನ ಕುಸುಮಧರ ಕಾಂತಿಲ ಎಂಬುವವರು ತಮಗಿರುವ ಸ್ವಲ್ಪ ಜಾಗವನ್ನು ಹಸನು ಮಾಡಿ ಪ್ರಥಮ ಬಾರಿಗೆ ಭತ್ತ ನಾಟಿ ಮಾಡಿದ್ದರೆ. ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆಗೆ ಮಾದರಿಯಾಗಿದ್ದಾರೆ.

Also Read  ಕಡಬ ವ್ಯಾಪ್ತಿಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ದೃಢ

 

 

 

 

 

error: Content is protected !!
Scroll to Top