ಕುಕ್ಕೆ ಸುಬ್ರಹ್ಮಣ್ಯ : ತಾರಕೇಶ್ವರಿ ಯು.ಎಸ್ ಅವರಿಗೆ ಡಾಕ್ಟರೇಟ್

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಜು.26:  ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ ಇಲ್ಲಿಯ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿರು ತಾರಕೇಶ್ವರಿ ಯು.ಎಸ್ ಇವರು ತಮ್ಮ ಅಧ್ಯಯನಕ್ಕಾಗಿ ಪ್ರತಿಷ್ಟಿತ ಡಾಕ್ಟರೇಟ್ ಪದವಿಯನ್ನ ಪಡೆದುಕೊಂಡಿದ್ದಾರೆ.

 

‘ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ; ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘ ಸಂಸ್ಥೆಗಳ ವಿಸ್ತರಣೆ ಮತ್ತು ಹಿಂದುತ್ವ ಸಿದ್ದಾಂತ ಪ್ರಸರಣದ ಅಧ್ಯಯನ’ ಎಂಬ ವಿಷಯದ ಬಗ್ಗೆ ಡಾಕ್ಟರೇಟ್ ಪದವಿಯನ್ನ ಪಡೆದುಕೊಂಡಿದ್ದಾರೆ. ಇವರಿಗೆ ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾದ್ಯಾಪಕರಾದ ಡಾ| ರಾಜರಾಮ್ ತೋಳ್ಪಾಡಿಯವರು ಅಧ್ಯಾಯನಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಡಾ| ತಾರಕೇಶ್ವರಿ ಯು. ಎಸ್ ರವರು ಹಲವಾರು ವರುಷಗಳಿಂದ ಕೆ. ಎಸ್. ಎಸ್ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಧೀಶರ ತ್ವರಿತಗತಿ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರೂ, ಮಾಜಿ ಜಿಲ್ಲಾ ಗ್ರಾಹಕರ ನ್ಯಾಯಧೀಶರೂ ಆಗಿರುವ ಶ್ರೀ ಹರ್ಷ ಅವರ ಪತ್ನಿ. ಹಾಗೂ ಪುತ್ತೂರಿನ ನ್ಯಾಯಾವಾದಿ ದಿ. ಯು.ಪಿ. ಶಿವರಾಮ್ ಅವರ ಮಗಳಾಗಿದ್ದಾರೆ.

Also Read  ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಮೃತ್ಯು…!

 

 

 

error: Content is protected !!
Scroll to Top