ಆನ್‍ಲೈನ್ ತರಗತಿ ಹಿನ್ನೆಲೆ – ಮೂಲ ಸೌಕರ್ಯ ಇಲ್ಲದೆ ಮಕ್ಕಳ ಪರದಾಟ

(ನ್ಯೂಸ್ ಕಡಬ) newskadaba.com , ಜು.25:
ಕೊರೋನಾ ಹಿನ್ನಲೆ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‍ಲೈನ್ ಹಾಗೂ ಚಂದನ ವಾಹಿನಿಯಲ್ಲಿ ತರಗತಿಗಳು ಆರಂಭಗೊಂಡಿವೆ.

 

 

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿಯಾದ ವರುಣ್, ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆಆಸರೆಯಾಗಬೇಕು ಅನ್ನೋ ಹಂಬಲ.
ಈ ಬಾಲಕನ ತಾಯಿ ಬೀಡಿ ಕಟ್ಟಿ ಕುಟುಂಬ ನಿರ್ವಹಿಸುತ್ತಿದ್ದಾರೆ. ತಂಗಿ 8 ನೇ ತರಗತಿಯಲ್ಲಿ ಓದ್ತಾ ಇದ್ದಾಳೆ. ಬಡತನದಲ್ಲಿ ಇರುವ ಇವರ ಮನೆಯಲ್ಲಿ ಆನ್ಲೈನ್ ತರಗತಿಗೆ ಬೇಕಾದ ಒಂದು ಸ್ಮಾರ್ಟ್ ಫೋನ್ ಆಗಲಿ, ಟಿವಿಯಾಗಲೀ, ಇಲ್ಲ. ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಸೂರು ಇಲ್ಲದಂತಾಗಿದೆ.
ಎಲ್ಲಾ ಮಕ್ಕಳು ಟಿವಿ, ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರಬೇಕಾದರೆ ಈ ಮಕ್ಕಳು ಮತ್ತು ಇವರ ಪೋಷಕರು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ.

error: Content is protected !!
Scroll to Top