ಮೈಸೂರು ಮೃಗಾಲಯದ ‘ಬ್ರಹ್ಮ’ ಗಂಡು ಹುಲಿ ಸಾವು

(ನ್ಯೂಸ್ ಕಡಬ) newskadaba.com ಮೈಸೂರು, ಜು.25: ಚಾಮರಾಜೇಂದ್ರ ಮೃಗಾಲಯದಲ್ಲಿ ʻಬ್ರಹ್ಮʼ ಹೆಸರಿನ ಗಂಡು ಹುಲಿಯು (20) ಶುಕ್ರವಾರ ಮಧ್ಯಾಹ್ನ ಸಾವನ್ನಪ್ಪಿದೆ.ಹುಲಿಯು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣದಿಂದಾಗಿ ಇಂದು ಮಧ್ಯಾಹ್ನ ಮೃತಪಟ್ಟಿದೆ.

 

ಬ್ರಹ್ಮ ಹುಲಿಯನ್ನು 2008ರ ಮಾರ್ಚ್‌ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಿಂದ ಸೆರೆಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಯೋಗ ಗುರು ಬಿ.ಕೆ.ಎಸ್‌. ಅಯ್ಯಂಗಾರ್‌ ಅವರು ಹುಲಿಯ ಜೀವಮಾನ ಪರ್ಯಂತರಕ್ಕೂ ದತ್ತು ಸ್ವೀಕರಿಸಿದ್ದರು.ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರವು ಸಂತಾಪ ಸೂಚಿಸಿದೆ.

Also Read  ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ತುಳಸಿ ಗಬ್ಬಾರ್ಡ್ ​ನೇಮಕ

 

error: Content is protected !!
Scroll to Top