ತಾಯಿಯ 11ನೇ ದಿನದ ತಿಥಿ ವಿಧಿ ವಿಧಾನದ ಬಳಿಕ ಮಕ್ಕಳಿಬ್ಬರು ಮೃತ್ಯು.!!!

(ನ್ಯೂಸ್ ಕಡಬ) newskadaba.com ಪಡುಬಿದ್ರಿ: ಜು.25.,
ತಾಯಿ ಮೃತಪಟ್ಟ 11ನೇ ದಿನಕ್ಕೆ ಇನ್ನಿಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಉಡುಪಿಯ ಪಡುಬಿದ್ರಿಯಲ್ಲಿ ನಡೆದಿದೆ.

o
ಪಡುಬಿದ್ರಿಯ ದಿ.ವೆಂಕಟರಾಯ ಆಚಾರ್ಯ ಅವರ ಪತ್ನಿ ವಾರಿಜಾಕ್ಷಿ ಆಚಾರ್ಯ (80) ನಿಧನ ಹೊಂದಿದ್ದರು. ಜುಲೈ 22ರ ಬುಧವಾರದಂದು 11ನೇ ದಿನದ ತಿಥಿ ವಿಧಿ ವಿಧಾನಗಳು ನಡೆದು ಕೆಲ ಗಂಟೆಗಳಲ್ಲಿ ಮಕ್ಕಳ ಪೈಕಿ ಹಿರಿಯ ಮಗನಾದ ಉದಯ ಆಚಾರ್ಯ(55) ಎಂಬವರು ಮಧ್ಯಾಹ್ನದ ಊಟ ಮುಗಿಸಿ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದರು.

Also Read  ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ ➤ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಎಚ್ಚರಿಕೆ


ತಡರಾತ್ರಿ ಎರಡೂವರೆ ಗಂಟೆಯ ಸುಮಾರಿಗೆ ಮತ್ತೋರ್ವ ಮಗನಾದ, ಬೆಂಗಳೂರು ವ್ಯಾಪ್ತಿಯ ವಿಶ್ವಕರ್ಮ ಸಂಘದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಆಚಾರ್ಯ ಯಾನೆ ವಿಶು ಆಚಾರ್ಯ (45) ಕೂಡಾ ಸಾವಿಗೀಡಾಗಿದ್ದಾರೆ.

error: Content is protected !!