ಮಕ್ಕಳ ಆನ್ ಲೈನ್ ವಿದ್ಯಾಭ್ಯಾಸಕ್ಕೆಂದು ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಮಾರಿದ ತಂದೆ ➤ ನೆರವಿಗೆ ಮುಂದಾದ ರೀಲ್ ಲೈಫ್ ವಿಲನ್

(ನ್ಯೂಸ್ ಕಡಬ) newskadaba.com ಮುಂಬೈ: ಜು.25.,
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ನೆರವು ನೀಡುವ ಮೂಲಕ ರಿಯಲ್ ಲೈಫ್ ನಲ್ಲಿ ಹೀರೋ ಆದ ನಟ ಸೋನು ಸೂದ್ ಇದೀಗ ಮತ್ತೊಂದು ಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.


ದೇಶಾದ್ಯಂತ ಕೊರೋನಾ ವೈರಸ್ ನಿಂದಾಗಿ ಶಾಲಾ ಕಾಲೇಜುಗಳನ್ನು ತೆರೆಯಲು ಸಾಧ್ಯವಾಗದೆ ಆನ್ ಲೈನ್ ಶಿಕ್ಷಣ ದೇಶದೆಲ್ಲೆಡೆ ಜಾರಿಯಾಗಿದೆ. ಆದರೇ ಬಡ ಕುಟುಂಬಗಳಿಗೆ ಆನ್ ಲೈನ್ ತರಗತಿಗಳು ಕಷ್ಟವಾಗಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಣ್ಣುಮಕ್ಕಳ ಆನ್ ಲೈನ್ ಶಿಕ್ಞಣಕ್ಕಾಗಿ ಮೊಬೈಲ್ ಕೊಳ್ಳುವುದಕ್ಕೆ, ಹಣವಿಲ್ಲದೆ ಸಾಕಿದ ಹಸುವನ್ನೇ ಮಾರಿದ್ದರು. ಇದೀಗ ಸೋನು ಸೂದ್ ಅವರು ಹಸು ಮಾರಿದ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ್ದಾರೆ.

Also Read  ದಕ್ಷಿಣ ಕನ್ನಡದಲ್ಲಿ ಇಂದು ಏರಿಕೆ ಕಂಡ ಕೊರೋನಾ ಸೋಂಕು ➤ 6 ಮಂದಿ ಬಲಿ, 248 ಮಂದಿ ಗುಣಮುಖ


ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಗಮ್ಮರ್‌ ಗ್ರಾಮದಲ್ಲಿ ನಲೆಸಿರುವ ಕುಲ್ದೀಪ್‌ ಕುಮಾರ್‌ ಎಂಬ ವ್ಯಕ್ತಿ ಹಸು ಮಾರಿ ಮೊಬೈಲ್ ಖರೀದಿಸಿದ್ದರು. ತನ್ನ ಹೆಣ್ಣು ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ ಅಗತ್ಯವಿದ್ದ ಕಾರಣ ಹಸುವನ್ನೇ ಮಾರಿದ್ದರು. ಈ ವಿಷಯ ದೇಶಾದ್ಯಂತ ಸುದ್ದಿಯಾಗಿದ್ದು ಸೋನು ಸೂದ್ ಅವರು ಅದು ಬಡ ಕುಟುಂಬಕ್ಕೆ ನೆರವಾಗುವುದಾಗಿ ತಿಳಿಸಿದ್ದಾರೆ.

error: Content is protected !!
Scroll to Top