(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25: ನಿನ್ನೆ ಎಂಟು ಪೈಸೆಯಷ್ಟು ಏರಿಕೆಯಾಗಿದ್ದ ಪೆಟ್ರೋಲ್ ಬೆಲೆ ಇವತ್ತು ಅಷ್ಟೇ ಮೊತ್ತದಷ್ಟು ಇಳಿಕೆಯಾಗಿದೆ. ಆದರೆ, ಡೀಸೆಲ್ ಬೆಲೆ ಸತತ ಎರಡನೇ ಬಾರಿ ಏರಿಕೆಯಾಗಿದೆ. ನಿನ್ನೆ 7 ಪೈಸೆ ಏರಿಕೆ ಡೀಸೆಲ್ ಬೆಲೆಯಲ್ಲಿ ಇವತ್ತು 8 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ಗೆ 83.04 ಇದೆ. ಡೀಸೆಲ್ ಬೆಲೆ 77.74 ಇದೆ.
ಪೆಟ್ರೋಲ್ಗಿಂತ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಕಳೆದ 11 ದಿನಗಳ ಅವಧಿಯಲ್ಲಿ ಡೀಸೆಲ್ ಬೆಲೆ 6 ಬಾರಿ ಹೆಚ್ಚಳಗೊಂಡಿದೆ. ಜುಲೈ 15ರಂದು 77.15 ಇದ್ದ ಡೀಸೆಲ್ ಬೆಲೆ ಈಗ 77.74ಕ್ಕೆ ಬಂದಿದೆ. ಈ 11 ದಿನಗಳಲ್ಲಿ 59 ಪೈಸೆಯಷ್ಟು ದುಬಾರಿಯಾಗಿದೆ. ಇದು ಇಂಡಿಯನ್ ಆಯಿಲ್ ಸಂಸ್ಥೆಯ ಪೆಟ್ರೋಲ್ ದರವಾಗಿದೆ. ಬೇರೆ ಕೆಲ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಕಡಿಮೆ ಇದೆ. ಪ್ರಮುಖ ನಗರಗಳ ಪೈಕಿ ಕೋಲ್ಕತಾದಲ್ಲಿ ಮಾತ್ರ ಬೆಂಗಳೂರಿಗಿಂತ ಸ್ವಲ್ಪ ಕಡಿಮೆ ಬೆಲೆ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 87 ರೂ ಗಡಿ ದಾಟಿದೆ.