ಟ್ರಕ್‍ನಲ್ಲಿ 59 ಕೋಣಗಳ ಸಾಗಾಟ ➤ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕೋಟ, ಜು.24:  ಟ್ರಕ್‍ವೊಂದರಲ್ಲಿ ಹಿಂಸಾತ್ಮಕವಾಗಿ ಬರೋಬ್ಬರಿ 59 ಕೋಣಗಳನ್ನ ಸಾಗಾಟ ಮಾಡುತ್ತಿದ್ದ ನಾಲ್ವರನ್ನ ಕೋಟ ಠಾಣೆಯ ಪೊಲೀಸರ ತಂಡ ಬಂದಿಸಿದ್ದಾರೆ, ಸಾಬರಕಟ್ಟೆ ಚೆಕ್ ಪೋಸ್ಟನಲ್ಲಿ ಶುಕ್ರವಾರ ಬೆಳಗಿನ ಜಾವ ಪರಿಶೀಲನೆಯ ಸಂದರ್ಭ ಹರಿಯಾಣದಿಂದ ಕೇರಳಕ್ಕೆ ಟ್ರಕ್‍ನಲ್ಲಿ 59 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಕೋಣಗಳನ್ನು ಮತ್ತು ಚಾಲಕ ಸಹಿತ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

 

 

ಕೋಟ ಠಾಣೆಯ ಪ್ರೊಬೆಷನಲ್ ಎಸ್ಪಿ ಸಂತೋಷ್ ಸಿಬಂದಿಗಳ ಜೊತೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಕೋಣಗಳನ್ನು ತುಂಬಿಸಿಕೊಂಡಿದ್ದ ಟ್ರಕ್ ಆಗಮಿಸಿತ್ತು. ಟ್ರಕ್‍ನ್ನು ಪರಿಶೀಲಿಸಿದಾಗ ಬರೋಬ್ಬರಿ 59 ಕೋಣಗಳನ್ನು ಅತ್ಯಂತ ಹಿಂಸಾತ್ಮಕವಾಗಿ ತುಂಬಲಾಗಿತ್ತು. ಹರಿಯಾಣದಿಂದ ಕೇರಳದ ತನಕ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಒಯ್ಯಲಾಗುತ್ತಿತ್ತು. ರಕ್ಷಿಸಿರುವ ಕೋಣಗಳನ್ನು ನೀಲಾವರ ಗೋಶಾಲೆಗೆ ಬಿಡಲಾಗಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಡಾ| ರಘು ನಿರಂತರ ಸೋತ ಹಿನ್ನೆಲೆ ►ಕಾಂಗ್ರೆಸ್ ಅಭ್ಯರ್ಥಿಯಾಗಿ ಶಶಿಧರ್ ಬೊಟ್ಟಡ್ಕರವರಿಗೆ ಸೀಟು ನೀಡಲು ಆಗ್ರಹ

 

 

error: Content is protected !!
Scroll to Top