ಕರೊನಾದಿಂದ ಶತಕದ ಹೊಸ್ತಿಲಲ್ಲಿ ಸಾವಿನ ಸಂಖ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.24:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡು ನಾಲ್ಕು ತಿಂಗಳ ಬಳಿಕ ಕರೊನಾ ಸಾವಿನ ಸಂಖ್ಯೆ ಶತಕದ ಹೊಸ್ತಿಲು ತಲುಪಿದೆ. ಮಾ.22ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.

ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 7 ಮಂದಿ ಬುಧವಾರ ಮೃತಪಟ್ಟಿದ್ದು ಗುರುವಾರದ ವರದಿಯಂತೆ ಅವರೆಲ್ಲರೂ ಕರೊನಾ ಸೋಂಕಿಗೊಳಪಟ್ಟಿದ್ದರು. ಈ ಮೂಲಕ ಮೃತರ ಒಟ್ಟು ಸಂಖ್ಯೆ 94ಕ್ಕೆ ಏರಿಕೆಯಾಗಿದ್ದು ಮೃತಪಟ್ಟವರಲ್ಲಿ ಬಹುತೇಕ ಮಂದಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದವರು. ದ.ಕ. ಜಿಲ್ಲೆಯಲ್ಲಿ ಗುರುವಾರ 218 ಪಾಸಿಟಿವ್ ಕೇಸ್ ವರದಿಯಾಗಿವೆ. ಇವುಗಳ ಪೈಕಿ 36 ನೇರ ಸಂಪರ್ಕದಿಂದ, 110 ಮಂದಿ ಐಎಲ್‌ಐ ಪ್ರಕರಣ, 16 ತೀವ್ರ ಉಸಿರಾಟದ ತೊಂದರೆ ಇರುವ ಪ್ರಕರಣವಾಗಿದ್ದು 57ರ ಸೋಂಕಿನ ಮೂಲ ದೃಢಪಡಿಸಲಾಗುತ್ತಿದೆ. ಚಿಕಿತ್ಸೆ ಯಶಸ್ವಿಯಾಗಿ ಪೂರೈಸಿರುವ ಒಟ್ಟು 118 ಮಂದಿ ವಿವಿಧ ಆಸ್ಪತ್ರೆಗಳಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 31068 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು ಪಾಸಿಟಿವ್ ಪ್ರಕರಣ 4214ಕ್ಕೆ ತಲುಪಿದೆ.

Also Read  ರಾಜ್ಯದಲ್ಲಿ 'ಸೈಬರ್ ಅಪರಾಧ ತಡೆ'ಗೆ ಮಹತ್ವದ ನಿರ್ಧಾರ..! - 'ಪ್ರತ್ಯೇಕ ಸೈಬರ್ ನೀತಿ' ರೂಪಿಸಲು ಸಚಿವ ಸಂಪುಟ ಅಸ್ತು

error: Content is protected !!
Scroll to Top