(ನ್ಯೂಸ್ ಕಡಬ) newskadaba.com ಸಸಿಹಿತ್ಲು,ಜು.24: ದ.ಕನ್ನಡ ಜಿಲ್ಲೆಯ ಸಸಿಹಿತ್ಲುವಿನಲ್ಲಿ ಮೀನುಗಾರರ ದೋಣಿಯೊಂದು ಸಮುದ್ರದ ಮಧ್ಯದಲ್ಲಿ ಮಗುಚಿ ಬಿದ್ದು ಅದರಲ್ಲಿದ್ದ ಆರು ಮಂದಿ ಮೀನುಗಾರರು ಯಾವುದೇ ಪ್ರಾಣಾಯಪಾಯ ಇಲ್ಲದೇ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸಸಿಹಿತ್ಲುವಿನ ಸುಧಾಕರ್, ತಾರಾನಾಥ್, ಹೇಮನಾಥ್ ಮತ್ತಿತರರು ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದರು. ಆದರೆ ಸಮುದ್ರ ಮಧ್ಯೆ ಹವಾಮಾನ ವೈಪರಿತ್ಯದ ಕಾರಣದಿಂದ ದೋಣಿಯು ಮಗುಚಿ ಬಿದ್ದಿದೆ. ಇದರಲ್ಲಿದ್ದ ಮೂರು ಮಂದಿ ಈಜಿಕೊಂಡು ದಡ ಸೇರಿದ್ದು, ಇನ್ನಿಬ್ಬರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ.ಉಳಿದ ಒರ್ವ ಮೀನುಗಾರ ಉತ್ತರ ದಿಕ್ಕಿನಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿಕೊಂಡು ಸಾಗಿ ಸ್ವಯಂ ರಕ್ಷಣೆಗೊಳಗಾಗಿದ್ದಾರೆ. ಅವರು ಆ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಸೇರಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Also Read ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ