(ನ್ಯೂಸ್ ಕಡಬ) newskadaba.com ಜು.23: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದಗಳಿಂದ ಸದಾ ದೂರ ಉಳಿಯಲು ಬಯಸುತ್ತಾರೆ. ಆದರೆ, ಕೆಲವೊಮ್ಮೆ ವಿವಾದಗಳನ್ನು ಅವರು ಅರಿವಿಲ್ಲದೆ ಮೈಮೇಲೆ ಎಳೆದುಕೊಂಡು ಬಿಡುತ್ತಾರೆ.ಈಗಲೂ ಅದೇ ರೀತಿ ಆಗಿದ್ದು, ದರ್ಶನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹೈಕೋರ್ಟ್ ರಿಜಿಸ್ಟರ್ಗೆ ದೂರು ಸಲ್ಲಿಕೆ ಆಗಿದೆ.ಕೊನೆಯ ಆಷಾಢ ಶುಕ್ರವಾರದ ದಿನ ದರ್ಶನ್, ಶೋಭಾ ಕರಂದ್ಲಾಜೆ, ಭಾಗ್ಯ ಮಹೇಶ್ ಹಾಗೂ ಅವರ ಬೆಂಬಲಿಗರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿದ್ದರು.
ಈ ವೇಳೆ ಪೂಜೆ ಪುನಸ್ಕಾರಗಳನ್ನು ಸಹ ಮಾಡಿದ್ದರು. ಆದರೆ, ಹೋಗಿದ್ದು ತಪ್ಪಿಲ್ಲ ಲಾಕ್ ಡೌನ್ ಟೈಂನಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿರೋದು ಇಲ್ಲಿ ತಪ್ಪಾಗಿದೆ. ಹೀಗಾಗಿ ವಕೀಲೆ ಗೀತಾಮಿಶ್ರಾ ಹೈಕೋರ್ಟ್ ಹೆಚ್ಚುವರಿ ರಿಜಿಸ್ಟರ್ಗೆ ಜ್ಞಾನಪನ ಪತ್ರ ಸಲ್ಲಿಸಿದ್ದಾರೆ. ಜೊತೆಗೆ ಕೊವೀಡ್ 19 ಮಾರ್ಗಸೂಚಿಗಳ ಉಲ್ಲಂಘನೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಹಾಕಿದ್ದಾರೆ.ಪ್ರಕರಣದಲ್ಲಿ ಹೆಚ್ಚುವರಿಯಾಗಿ ಗೀತಾಮಿಶ್ರಾ ಮೆಮೋ ಸಲ್ಲಿಕೆ ಮಾಡಿದ್ದಾರೆ. ದರ್ಶನ್, ಶೋಭಾ ಕರಂದ್ಲಾಜೆ ಹಾಗೂ ಅವರ ಬೆಂಬಲಿಗರು ಚಾಮುಂಡಿ ಬೆಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಹಾಕದೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಟ ದರ್ಶನ್ ಓರ್ವ ಹೀರೋ, ಜೊತೆಗೆ ರೋಲ್ ಮಾಡೆಲ್ ಸಹ. ಇವರನ್ನು ಸಾಕಷ್ಟು ಜನ ಫಾಲೋ ಮಾಡ್ತಾರೆ. ಅಂತಹದ್ದರಲ್ಲಿ ಇವರೇ ಕೊರೋನಾ ನಿಯಮಗಳನ್ನು ಪಾಲನೆ ಮಾಡದೆ, ಕಾನೂನಿಗೆ ಅಗೌರವ ತಂದಿದ್ದು ಸರಿಯಲ್ಲ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಗೀತಾ ಮಿಶ್ರಾ ಮೆಮೋದಲ್ಲಿ ಹೈಕೋರ್ಟ್ ರಿಜಿಸ್ಟರ್ ಗೆ ಮನವಿ ಮಾಡಿದ್ದಾರೆ.