ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ – ಮೂವರು ಆರೋಪಿಗಳು ಅರೆಷ್ಟ್

( ನ್ಯೂಸ್ ಕಡಬ)  newskadaba.com ಪಡುಬಿದ್ರೆ  ಜುಲೈ ,23: ತೆಂಕ ಎರ್ಮಾಳ್ ಎಂಬಲ್ಲಿನ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಇಂದು ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನ  ಬಂಧಿಸಿದ್ದಾರೆ.

 

 

ಮುಖ್ಯ ಆರೋಪಿ  ಕಮಲ್ ಸಾಹೇಬ್ ತಪ್ಪಿಸಿಕೊಂಡಿದ್ದು, ಆತನ ಅಳಿಯ ನಾಸಿರ್, ಮೊಮ್ಮಗ ಜಮೀರ್ ಮತ್ತು ಇನ್ನೋರ್ವ ಸದ್ದಾಂ ನನ್ನು ಪೊಲೀಸರು ಬಂಧಿಸಿದ್ದಾರೆ.ಈ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು. ಖಚಿತ ಮಾಹಿತಿ ಪಡೆದು  ಪಡುಬಿದ್ರಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಸ್ಥಳದಿಂದ 3 ದನಗಳನ್ನು ಮತ್ತು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ನಗರಸಭಾ ಸದಸ್ಯ ಆತ್ಮಹತ್ಯೆ

 

 

 

 

error: Content is protected !!
Scroll to Top