ಕುಂದಾಪುರ : ಹಟ್ಟಿಯಲ್ಲಿದ್ದ ದನ ಕದ್ದೋಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕುಂದಾಪುರ, ಜು.23:  ಹಟ್ಟಿಯಲ್ಲಿದ್ದ ಎರಡು ದನಗಳನ್ನು ಹಿಂಸಾತ್ಮಾಕವಾಗಿ ಇನ್ನೋವಾ ಕಾರಲ್ಲಿ ಕದ್ದೋಯ್ದ ಘಟನೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಸುರಕುಂದ ಎಂಬಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಮಂಗಳವಾರ ಮುಂಜಾನೆ ಆರೋಪಿಗಳಾದ ಉನ್ನಿ ಮೊಹಿನ್‌ ಮತ್ತು ಅವರ ಇಬ್ಬರು ಮಕ್ಕಳು ಇನೋವಾ ಕಾರಿನಲ್ಲಿ ಹಾಗೂ ಮೋಟಾರು ಸೈಕಲಿನಲ್ಲಿ ಬಂದಿದ್ದು ದೂರುದಾರರ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ತಮ್ಮ ಕಾರಿನಲ್ಲಿ ಹಿಂಸಾಸ್ಮಾಕವಾಗಿ ತುಂಬಿಸಿ ಕದ್ದೊಯುತ್ತಿದ್ದಾಗ ಎಚ್ಚರಗೊಂಡ ಮನೆಯವರು ಇದನ್ನು ನೋಡಿ ಬೊಬ್ಬೆ ಹಾಕಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

 

ಈ ಬಗ್ಗೆ ಮನೆಯ ಮಾಲೀಕರು ರಾಜೀವಿ ಶೆಡ್ತಿ ಎಂಬವರು ದೂರಿನ ಅನ್ವಯ ಆರೋಪಿಗಳಾದ ಉನ್ನಿ ಮೊಹಿನ್‌ ಮತ್ತು ಅವರ ಇಬ್ಬರು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಸಾರ್ವಜನಿಕರು ಬೆಳಿಗ್ಗೆ 5-00 ಗಂಟೆಗೆ ಚಿತ್ತೂರು ಗ್ರಾಮದ ಮೆರ್ಡಿ ಎಂಬಲ್ಲಿ ಇನೋವಾ ವಾಹನ ಮತ್ತು ಮೋಟಾರು ಸೈಕಲ್‌ನ್ನು ತಡೆ ಹಿಡಿದು ಸ್ಥಳಕ್ಕೆ ದೂರುದಾರರ ಕುಟುಂಬಸ್ಥರು ಹೋಗಿ ಪರಿಶೀಲಿಸಿದಾಗ ಇನೋವಾ ಕಾರು KA 19.C.1635 ಹಿಂಬದಿ ಸೀಟಿನಲ್ಲಿ ದೂರುದಾರರ ಎರಡು ದನಗಳು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಹಾಗೆಯೇ ಪಕ್ಕದಲ್ಲಿ ಮೋಟಾರು ಸೈಕಲ್‌ (KL 57A 7825) ನಲ್ಲಿ ಆರೋಪಿ ಉನ್ನಿ ಮೊಹಿನ್‌ ಇದ್ದದ್ದು ತಿಳಿದು ಬಂದಿದೆ.

Also Read  ಸಿದ್ದರಾಮಯ್ಯ ಸಿ ಎಲ್ ಪಿ ನಾಯಕ, ಗೌರವ ಕೊಡಲೇ ಬೇಕು ➤ ಸಚಿವ ಡಿಕೆಶಿವಕುಮಾರ್ ಹೇಳಿಕೆ

 

error: Content is protected !!
Scroll to Top