ಸುಳ್ಯದಲ್ಲಿ ದನದ ಮಾಂಸ ಸಾಗಾಟ – ಆರೋಪಿಯ ಬಂಧನ

(ನ್ಯೂಸ್ ಕಡಬ ) newskadaba.com ಸುಳ್ಯ, ಜುಲೈ .22:   ಸುಳ್ಯ ಗಾಂಧಿನಗರದಿಂದ ಪೈಚಾರು ಕಡೆಗೆ ಸೂಟ್ ಕೇಸ್‌ನಲ್ಲಿ ದನದ ಮಾಂಸ ತುಂಬಿಸಿ ಪೈಚಾರು ಕಡೆ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಸಿದ್ದಾರೆ.

 

ಬಂಧಿತ ಆರೋಪಿಯನ್ನು ಕಲ್ಲುಮುಟ್ಲು ನಿವಾಸಿ ನಿಸಾರ್ (30) ಎಂದು ಗುರುತಿಸಲಾಗಿದೆ.ಲಾಕ್ ಡೌನ್ ಹಿನ್ನಲೆಯಲ್ಲಿ ಪೊಲೀಸರು ಸುಳ್ಯದ ಜ್ಯೋತಿ ಸರ್ಕಲ್ ಬಳಿ ಸ್ಕೂಟರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂತು. ಪೊಲೀಸರು ಸ್ಕೂಟರ್ ಸಮೇತ ದನದ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Also Read  ಉಜಿರೆ ರುಡ್‍ಸೆಟ್‍ನಲ್ಲಿ ಎಸ್.ಡಿ.ಎಮ್ ಶಾಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಮಾಹಿತಿ ಕಾರ್ಯಗಾರ

 

error: Content is protected !!
Scroll to Top