ಪೊಳಲಿ: ಶ್ರಿ ರಾಜಾರಾಜೇಶ್ವರಿ ಸನ್ನಿಧಿಯಲ್ಲಿ ► ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕರಸೇವೆ

(ನ್ಯೂಸ್ ಕಡಬ) newskadaba.com ಪೊಳಲಿ,ಸೆ.11, ಇಲ್ಲಿನ ಇತಿಹಾಸ ಪ್ರಸಿದ್ದ ಶ್ರಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು , ಹಲವಾರು ಸಂಘ ಸಂಸ್ಥೆಗಳು ಕರಸೇವೆಯ ಮೂಲಕ ದೇವಾಲಯದ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿರುತ್ತಾರೆ.

ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನ ಸುಮಾರು ನೂರು ಮಂದಿ ವಿದ್ಯಾರ್ಥಿಗಳು  ಪೊಳಲಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿ, ನಾವೂ ಬಿಸಿಲಲ್ಲಿ ದುಡಿಯಬಲ್ಲೆವು ಎಂದು ತೋರಿಸಿಕೊಟ್ಟಿದ್ದಾರೆ. ಲವಲವಿಕೆಯಿಂದ ಕೆಲಸಗಾರರೊಂದಿಗೆ ಕೂಡಿ ಎಲ್ಲಾ ಕೆಲಸಗಳನ್ನು ಮಾಡುತ್ತಾ ನುರಿತ ಕೆಲಸಗಾರರಿಗೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.


ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತೆ ಅವರ ಬೆನ್ನೆಲುಬಾಗಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಕೃಷ್ಣ ಪ್ರಭು, ರಾ.ಸೇಯೋ ಘಟಕಾಧಿಕಾರಿಯಾದ ನಾರಾಯಣ ಸ್ವಾಮಿ, ಉಪನ್ಯಾಸಕರುಗಳಾದ ಅನಂತಕೃಷ್ಣ ಕಾಮತ್ , ಸಂತೋಷ್ ಕುಮಾರ್ ಡಿ ಕೆ, ಸುಧೀರ್ , ನಿರಂಜನ್ ರೈ , ರೋಹಿತ್ ಆಚಾರ್ಯ ,ಶ್ರೀಮತಿ ಮೇಧಾ, ಸುರೇಶ್ ನಾಯಕ್ , ಅಜಿತ್ ನಾಯಕ್, ಚಂದ್ರಶೇಖರ್ ,ಸುಭ್ರಹ್ಮಣ್ಯ ಭಟ್, ಸುಧಾಕರ್ ಹಾಗೂ ಮೀರಾ ಹೆಗಡೆ ಮಾರ್ಗದರ್ಶನ ನೀಡುತ್ತಾ ವಿದ್ಯಾರ್ಥಿಗಳೊಂದಿಗೆ ಸೇರಿ ಕರಸೇವೆಯಲ್ಲಿ ಭಾಗಿಯಾಗಿದ್ದಾರೆ.

error: Content is protected !!
Scroll to Top