ಪುತ್ತೂರು ಹಾಗೂ ಕಡಬ 9 ಮಂದಿಗೆ ಕೊರೊನಾ ದೃಢ ➤ ಅವಳಿ ತಾಲೂಕುಗಳಲ್ಲಿ ಒಟ್ಟು120 ಕೊರೋನಾ ಪ್ರಕರಣ… !!!

(ನ್ಯೂಸ್ ಕಡಬ) newskadaba.com ಕಡಬ,ಜು.22 : ಪುತ್ತೂರು ಹಾಗೂ ಕಡಬ ಅವಳಿ ತಾಲೂಕುಗಳಲ್ಲಿ ಬುಧವಾರ ಒಟ್ಟು 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಮೂಲಕ ಎರಡು ತಾಲೂಕಿನಲ್ಲಿ ಒಟ್ಟು120 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

 

ಬುಧವಾರ ಬೆಳಿಗ್ಗಿನ ಅರೋಗ್ಯ ಇಲಾಖೆಯ ವರದಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಒಟ್ಟು 8 ಜನರಿಗೆ ಸೋಂಕು ತಗಲಿರುವುದು ಖಚಿತವಾಗಿದೆ.ಅದರಲ್ಲಿ ಕೋರ್ಟು ರಸ್ತೆಯ ಉದ್ಯಮಿ ದಂಪತಿಗಳಿಗೂ ಸೋಂಕು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಕೇರಳದಿಂದ ಆಗಮಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕಿನ ಸುಂಕದಕಟ್ಟೆ ನಿವಾಸಿ 53 ವರ್ಷ ವಯಸ್ಸಿನ ಪುರುಷರೊಬ್ಬರ ವರದಿಯೂ ಕೊರೋನ ಪಾಸಿಟಿವ್‌ ಬಂದಿದೆ.
ಪುತ್ತೂರಿನ 33 ವರ್ಷ ವಯಸ್ಸಿನ ಇಬ್ಬರು ಪೊಲೀಸರು, ಬನ್ನೂರು ನಿವಾಸಿ 75 ವರ್ಷ ಪ್ರಾಯದ ಪುರುಷ, ಕೋರ್ಟು ರಸ್ತೆ ನಿವಾಸಿ ಹಾಗೂ ಉದ್ಯಮಿ ದಂಪತಿಗಳಾದ 62 ವರ್ಷ ವಯಸ್ಸಿನ ಪುರುಷ, 53 ವರ್ಷದ ಅವರ ಪತ್ನಿ, ಅರಿಯಡ್ಕ ನಿವಾಸಿ 58 ವರ್ಷ ವಯಸ್ಸಿನ ಮಹಿಳೆ, ಸಾಮೆತ್ತಡ್ಕ ನಿವಾಸಿ 37 ವರ್ಷದ ಪುರುಷ, ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ಎಂಬಲ್ಲಿನ ನಿವಾಸಿ 21 ವರ್ಷ ವಯಸ್ಸಿನ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.
ಈ 9 ಪ್ರಕರಣಗಳ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಒಟ್ಟು120 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

 

Also Read  ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಕ್ಷಣಗಣನೆ ► ಫಲಿತಾಂಶ ಪಡೆಯಲು ಕ್ಲಿಕ್ ಮಾಡಿ

 

error: Content is protected !!
Scroll to Top