ಗೊಬ್ಬರ ಹೊತ್ತು ಕೃಷಿ ಬೇಸಾಯ ಮಾಡುತ್ತಿರುವ ಬಿಗ್ ಬಾಸ್‌ ಫೈನಲ್ ಸ್ಪರ್ಧಿ ಭೂಮಿ ಶೆಟ್ಟಿ… !!!

(ನ್ಯೂಸ್ ಕಡಬ) newskadaba.com ಕುಂದಾಪುರ: ಜು.22., ಬಿಗ್ ಬಾಸ್‌ ಸೀಸನ್‌ನಲ್ಲಿ 7ನಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಕುವರಿ ಭೂಮಿ ಶೆಟ್ಟಿ ಸದ್ಯ ಬೆಂಗಳೂರು  ಸಿಟಿಯಿಂದ ದೂರವಿದ್ದು, ಇದೀಗ ತನ್ನ ಹುಟ್ಟೂರಿನಲ್ಲಿ ಕೃಷಿ ಕಾಯಕದಲ್ಲಿ ಖುಷಿ ಕಾಣುತ್ತಿದ್ದಾರೆ.


ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯ ಭೂಮಿ ಶೆಟ್ಟಿ, ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ ಇದ್ದರು. ಸದ್ಯ ಕೊರೋನಾ ಹಿನ್ನಲೆ ಲಾಕ್ ಡೌನ್ ಅದ ಕಾರಣ ಊರಲ್ಲೇ ಇದ್ದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.


ಭೂಮಿ ಶೆಟ್ಟಿ ಅವರ ಅಜ್ಜ ಭತ್ತದ ಬೇಸಾಯ ಮಾಡುತ್ತಿದ್ದ ಭೂಮಿ ಈ ಬಾರಿ ಬೇಸಾಯ ಮಾಡುವುದು ಬೇಡ ಎನ್ನುವ ನಿರ್ಧಾರ ಮನೆಯವರದ್ದಾಗಿತ್ತು.. ಆದ್ರೆ ನಾವೆಲ್ಲರೂ ಮನೆಯಲ್ಲೇ ಇದ್ದು ಯಾಕೆ ವ್ಯವಸಾಯ ಮಾಡಬಾರದು ಅಂತ ಯೋಚನೆ ಬಂದು, ಭೂಮಿ ಶೆಟ್ಟಿ ಅವರೇ ಮುಂದಾಳತ್ವ ವಹಿಸಿ, ಮನೆಯವರ ಸಹಕಾರದಿಂದ ಕೃಷಿ ಚಟುವಟಿಕೆ ಮಾಡಿ ಖುಷಿ ಪಡುತ್ತಿದ್ದಾರೆ.

Also Read  ಸುಳ್ಯ: ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ➤ ಆಸ್ಪತ್ರೆಯ ಹಾದಿ ಮಧ್ಯೆ ಮೃತ್ಯು

ಭೂಮಿ ಶೆಟ್ಟಿ ತಾವೇ ಸ್ವತಃ ಗೊಬ್ಬರ ಹೊತ್ತು, ನಾಟಿ ಮಾಡಿ ಬೆಳಗ್ಗಿನಿಂದ ಸಂಜೆವರೆಗೂ ಕೃಷಿಕಳಂತೆ ಹೊಲದಲ್ಲಿ ದುಡಿದು ಬೆವರು ಸುರಿಸಿದ್ದಾರೆ.. ಕೃಷಿಯಲ್ಲಿ ತೊಡಗಿಸಿಕೊಂಡ ಅಪರೂಪದ ಪೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸಗೊಂಡಿದ್ದಾರೆ.

error: Content is protected !!
Scroll to Top