ಗಾಯಗಳಿಂದ ರಸ್ತೆಯಲ್ಲಿ ಬಿದ್ದು ವ್ಯಕ್ತಿಯ ನರಳಾಟ ➤ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಜರಂಗದಳ

(ನ್ಯೂಸ್ ಕಡಬ) newskadaba.com ಪುತ್ತೂರು,ಜು.22:  ಮೊಣಕಾಲಿನ ಮಂಡಿ ಜಾರಿದಂತಿದ್ದು, ಎದ್ದು ನಿಲ್ಲಲಾಗುತ್ತಿಲ್ಲ, ಹೊಟ್ಟೆಯಲ್ಲಿ ಹೊಕ್ಕುಳ ಪಕ್ಕದಲ್ಲಿ ಮಾಂಸ ಸೀಳಿ ಹೊರಬಂದಂದಂತೆ ಕಾಣುತ್ತಿದ್ದು, ಅದಕ್ಕೆ ಪಂಚೆಯನ್ನು ಮುಚ್ಚಿಕೊಂಡು ನೋವನ್ನು ಸಹಿಸಿಕೊಂಡು ರಸ್ತೆ ಬದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಯೊಬ್ಬನ್ನು ಪುತ್ತೂರಿನ ಬಜರಂಗದಳದ ಕಾರ್ಯಕರ್ತರು ಸರಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

 

 


ಮೂಲತ: ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಶಂಕರ ಯಾನೆ ಮುನ್ನ ಎಂದು ಗರುತಿಸಲಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರು ಪರಿಸರದಲ್ಲಿ ನಡೆದಿದ್ದ ಹೊಡೆದಾಟ ಪ್ರಕರಣದಲ್ಲಿ ಸಿಲುಕಿ ಗಂಭೀವಾಗಿ ಗಾಯಾಗೊಂಡಿದ್ದ ಇವರನ್ನ ಮಂಗಳೂರಿನ ವೆನ್ಲಾಕ್ ನಲ್ಲಿ ದಾಖಲಿಸಲಾಗಿತ್ತು. ಬಳಿಕ ಕೋವಿಡ್ ಆಸ್ಪತ್ರೆಯಾಗಿ ವೆನ್ಲಾಕ್ ಬದಲಾದರಿಂದ ಅವರನ್ನ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇವರು ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ನಾಪತ್ತೆಯಾಗಿ, ಪುತ್ತೂರಿನ ಕೂಗಳತೆ ದೂರದಲ್ಲಿ ಬಿದ್ದುಕೊಂಡಿದ್ದು ಕಂಡು ಬಂದಿದೆ. ವಿಚಾರ ತಿಳಿದ ಪುತ್ತೂರು ನಗರ ಠಾಣೆ ಇನ್‍ಸ್ಪೆಕ್ಟರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಅವರ ಸಹೋದರನಿಗೆ ಮಾಹಿತಿ ತಿಳಿಸಿದ್ದಾರೆ. ಈ ನಡುವೆ ವ್ಯಕ್ತಿಯ ಆರೈಕೆಗಾಗಿ ಆಸ್ಪತ್ರೆಗೆ ಸೇರಿಸುವ ನಿಟ್ಟಿನಲ್ಲಿ ಬಜರಂಗದಳ ಮುಂದೆ ಬಂದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ .

 

Also Read  ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಮಹಿಳೆ ಆತ್ಮಹತ್ಯೆ

 

error: Content is protected !!
Scroll to Top