ಏನೆಕಲ್ : ಜೀಪು – ಬೈಕ್ ಪರಸ್ಪರ ಡಿಕ್ಕಿ ➤ ಬೈಕ್ ಸವಾರನಿಗೆ ಗಾಯ



(ನ್ಯೂಸ್ ಕಡಬ) newskadaba.com ಏನೆಕಲ್ , ಜು.22:  ಏನೆಕಲ್‍ನಲ್ಲಿ ಜೀಪು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್ ಸವಾರನಿಗೆ ತಲೆಗೆ ಗಾಯಗಳಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.





ಬಳ್ಪ ಸಿಂಡಿಕೇಟ್ ಬ್ಯಾಂಕ್ ನ ಉದ್ಯೋಗಿ ಸುಬ್ಬದಾಸ್ ರವರು ಕರ್ತವ್ಯಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬನ ಆನಂದ ಎಂಬುವರ ಜೀಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗುದ್ದಿದ್ದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟರು. ಬೈಕ್ ಸವಾರ ದಾಸ್ ರವರ ತಲೆಗೆ ಸ್ವಲ್ಪ ಗಾಯಗಳಾಗಿದ್ದು ಇವರನ್ನ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.






 

 

error: Content is protected !!
Scroll to Top