ಉಡುಪಿ ಜಿಲ್ಲೆಯ ಗಡಿ ಸೀಲ್‍ಡೌನ್ ಆದೇಶ ರದ್ದು ➤ ಬಸ್ ಸೇವೆ ಆರಂಭ, ಅನಾವಶ್ಯಕ ಓಡಾಟಕ್ಕೆ ಬ್ರೇಕ್

(ನ್ಯೂಸ್ ಕಡಬ) newskadaba.com ಉಡುಪಿ, ಜು.21:  ಕೋವಿಡ್-19 ಹರಡುವಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಾರಿ ಮಾಡಿದ್ದ ಗಡಿ ಸೀಲ್‍ಡೌನ್ ಆದೇಶವನ್ನು ರದ್ದು ಪಡಿಸಿದ್ದು, ಜು.22 ರಂದು ಸರಕಾರಿ ಬಸ್ ಸೇವೆ ಯಥಾಸ್ಥಿತಿಯಲ್ಲಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಲಾಕ್‍ಡೌನ್ ಇರುವುದಿಲ್ಲ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರದಿಂದ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಆರಂಭವಾಗಲಿದೆ.

 

 

ಜು. 22 ರಂದು ಸರಕಾರಿ ಬಸ್ ಸೇವೆ ಆರಂಭವಾಗಲಿದ್ದು, ಖಾಸಗಿ ಬಸ್ ಮಾಲೀಕರ ಸಭೆ ಕರೆದು ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸುತ್ತೇವೆ. ಅವರು ಒಪ್ಪದೇ ಹೋದರೆ ಆ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಬಸ್‍ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಓಡಿಸಬೇಕು. ಜಿಲ್ಲೆಯ ಗಡಿ ಸೀಲ್‍ಡೌನ್ ಆದೇಶವಷ್ಟೇ ರದ್ದು ಮಾಡಿದ್ದು, ಅನಾವಶ್ಯಕವಾಗಿ ಜಿಲ್ಲೆಗೆ ಬರಬೇಡಿ. ತುರ್ತು ಕೆಲಸ ಹಾಗೂ ಮೆಡಿಕಲ್ ಸೇವೆಗೆ ಜಿಲ್ಲೆಗೆ ಬರಬಹುದು. ಜಿಲ್ಲೆಯ ಚೆಕ್‍ಪೋಸ್ಟ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ಮಾಹಿತಿ ನೀಡಿದರು.

error: Content is protected !!
Scroll to Top