ದಕ್ಷಿಣಕನ್ನಡದಲ್ಲಿ ನಾಳೆ ಲಾಕ್ ಡೌನ್ ➤ಗುರುವಾರದಿಂದ ಎಂದಿನಂತೆ ವ್ಯಾಪಾರ ಆರಂಭ…!!!

(ನ್ಯೂಸ್ ಕಡಬ) newskadaba.com ಮಂಗಳೂರು: ಜು.21., ರಾಜ್ಯಾದ್ಯಂತ ಲಾಕ್ ಡೌನ್ ತೆರವುಗೊಳಿಸಿದರೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಳೆ (ಜು.22) ಲಾಕ್ ಡೌನ್ ಮುಂದುವರಿಯಲಿದೆ.

 

ಕೊರೊನಾ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಿಸಿದ್ದು ಇದೀಗ ಮುಖ್ಯಮಂತ್ರಿಗಳ ನಿರ್ದೇಶನದಂತೆ ಜು.23ರಿಂದ ಲಾಕ್ ಡೌನ್ ಅನ್ನು ತೆರವುಗೊಳಿಸಲಾಗುತ್ತದೆ. ಗುರುವಾರದಿಂದ ಎಂದಿನಂತೆ ಅಂಗಡಿ ಮುಂಗಟ್ಟುಗಳು ವಾಣಿಜ್ಯ ವ್ಯವಹಾರಗಳು,ಕಚೇರಿಗಳು ತೆರೆಯಲಿದೆ ಎಂದು ದಕ್ಷಿಣಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Also Read  ಮನೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!

 

 

error: Content is protected !!
Scroll to Top