ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ 100 ಬಡ ಕುಟುಂಬಕ್ಕೆ ಅಹಾರ ಸಾಮಾಗ್ರಿಗಳ ಕಿಟ್ ವಿತರಣೆ…

(ನ್ಯೂಸ್ ಕಡಬ) newskadaba.com ಪುತ್ತೂರು: ಜು.21., ಹಿಂದು ಜಾಗರಣ ವೇದಿಕೆ ಇದರ ವತಿಯಿಂದ ಮೂರನೇ ಹಂತದಲ್ಲಿ ತಾಲೂಕಿನ 100 ಅಶಕ್ತ ಕುಟುಂಬಗಳಿಗೆ ಅಕ್ಕಿ ಸಹಿತ ದಿನಬಳಕೆಯ ಅಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಕಲ್ಲಾರೆ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ನಗರ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷರಾದ ಪ್ರಕಾಶ್ಚಂದ್ರ ರೈ ವಹಿಸಿದರು. ಉದ್ಘಾಟನೆಯನ್ನು ರಾಘವೇಂದ್ರ ಮಠದ ಆಡಳಿತ ಮುಕ್ತೇಸರ ಯು.ಪೂವಪ್ಪ ರವರು ನೆರವೇರಿಸಿದರು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಮಾಲೀಕ ಯುವ ಉದ್ಯಮಿ ಕೆದಂಬಾಡಿ ಗುತ್ತು ಸೀತಾರಾಮ್ ರೈ,ಸ್ಥಳೀಯ ನಗರಸಭಾ ಸದಸ್ಯರಾದ ಮನೋಹರ್ ಕಲ್ಲಾರೇ,ಹಿಂದು ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ,ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಉಪಸ್ಥಿತರಿದ್ದರು.

Also Read  ಅಪರಾದ ಚಟುವಟಿಕೆಗಳ ಮೇಲೆ ನಿಗಾ ➤ ನಗರಾಭಿವೃದ್ಧಿ ಸಚಿವ ಸೂಚನೆ

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ ಕಾರ್ಯಕ್ರಮ ನಿರೂಪಿಸಿದರು,ದಿನೇಶ್ ಪಂಜಿಗಾ ಸ್ವಾಗತಿಸಿದರು ,ಮನೋಜ್ ಉಡಾಂಗಳ ವಂದಿಸಿದರು.

error: Content is protected !!
Scroll to Top