ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ಕಾಡುಗಳ್ಳ ವೀರಪ್ಪನ್ ಮಗಳು ನೇಮಕ..!!

(ನ್ಯೂಸ್ ಕಡಬ) newskadaba.com ಚೆನ್ನೈ: ಜು.21., ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಭಯೋತ್ಪಾದಕನೆಂದೇ ಗುರುತಿಸಲ್ಪಟ್ಟ ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಇದೀಗ ಸಮಾಜಕ್ಕೆ ಪ್ರೀತಿಯನ್ನು ಮರಳಿ ನೀಡಲು ಹೊರಟಿದ್ದಾರೆ.


ಬೆಂಗಳೂರಿನಲ್ಲಿ ಐದು ವರ್ಷ ಕಾನೂನು ಶಿಕ್ಷಣ ವ್ಯಾಸಂಗ ಮಾಡಿರುವ ವಿದ್ಯಾರಾಣಿಯು ಈವರೆಗೆ ವೀರಪ್ಪನ್ ಪುತ್ರಿ ಎಂದೇ ಗುರುತಿಸಿಕೊಂಡವರು. ಜುಲೈ 21 ರಂದು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.


ಜನರಿಗೆ ಸೇವೆ ಸಲ್ಲಿಸಲೆಂದು ನಾಗರಿಕ ಸೇವೆಗಳಿಗೆ ಸೇರ್ಪಡೆಯಾಗುವ ಕನಸು ವಿದ್ಯಾರಾಣಿ ಅವರಿಗಿತ್ತು. ಇದೀಗ ಕನಸು ನನಸಾಗುವ ಹಂತಕ್ಕೆ ತಲುಪಿದ್ದೇನೆ.
ತಂದೆ ವೀರಪ್ಪನ್ ಬಗ್ಗೆ ಎಲ್ಲರಿಗೂ ಭಯವಿತ್ತು. ಆದರೆ ನನ್ನನ್ನು ಅಂಥವನ ಮಗಳು ಎಂಬಂತೆ ಕೀಳಾಗಿ ಕಾಣಲಿಲ್ಲ. ಸಮಾಜವು ನನಗೆ ಕೊಟ್ಟದ್ದನ್ನು ಹಿಂದಿರುಗಿಸಲು ರಾಜಕೀಯ ಒಂದು ಸಾಧನ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಜನರು ಸದಾ ಪ್ರೀತಿಸುತ್ತಿದ್ದರು. ನನ್ನ ಬಗ್ಗೆ ಯಾರಿಗೂ ಯಾವುದೇ ಪೂರ್ವಾಗ್ರಹ ಇರಲಿಲ್ಲ ಎಂದು ಅವರು ಹೇಳಿದರು.
ರಾಜಕೀಯಕ್ಕೇ ಸೇರಲು ಬಿಜೆಪಿಯನ್ನೇ ಏಕೆ ಆರಿಸಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ವಿದ್ಯಾರಾಣಿ, ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರದ ಬಗೆಗಿನ ದೃಷ್ಟಿಕೋನದಿಂದ ಪ್ರೇರಿತರಾಗಿದ್ದೆ. ಆದ್ದರಿಂದಲೇ ಭಾರತೀಯ ಜನತಾ ಪಕ್ಷವನ್ನು ಆರಿಸಿಕೊಂಡೆ ಎನ್ನುತ್ತಾರೆ. ಸದ್ಯ ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ನೆಲೆಯನ್ನು ಹೊಂದಿಲ್ಲ.

Also Read  ತೀರ್ವ ಜ್ವರದಿಂದ ಎಂಟು ತಿಂಗಳ ಮಗು ಮೃತ್ಯು ➤ ಪತಿ ವಿರುದ್ದ ದೂರು ದಾಖಲು 

ಕುಖ್ಯಾತ ಗಂಧದ ಕಳ್ಳಸಾಗಣೆದಾರ, ದಂತಚೋರನಾಗಿದ್ದ ವೀರಪ್ಪನ್‌ನನ್ನು 2004 ರಲ್ಲಿ ತಮಿಳುನಾಡಿನ ವಿಶೇಷ ಕಾರ್ಯಪಡೆ (STF) ಎನ್‌ಕೌಂಟರ್ ಮಾಡಿತ್ತು. ವೀರಪ್ಪನ್ 2000 ರಲ್ಲಿ ಕನ್ನಡದ ಪ್ರಖ್ಯಾತ ನಟ ರಾಜ್‌ಕುಮಾರ್ ಮತ್ತು ಕರ್ನಾಟಕದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ಅಪಹರಿಸಿದ್ದ.

error: Content is protected !!
Scroll to Top