ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ►ಮೀನುಗಳು ಯಾವ ಜಾಗದಲ್ಲಿ ಇವೆ ಎಂಬುದನ್ನು ಇನ್ನ್ಮುಂದೆ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು…!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.11, ಜೀವದ ಹಂಗು ತೊರೆದು ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರಿಕೆಗಾಗಿ ಹೊಸ ಮೊಬೈಲ್ ಆ್ಯಪ್ ರೆಡಿಯಾಗಿದೆ. ಮೀನು ಯಾವ ಜಾಗದಲ್ಲೇ ಇದೆ ಎಂಬುದರ ಖಚಿತ ಮಾಹಿತಿಯನ್ನು ಈ ಮೊಬೈಲ್ ಆ್ಯಪ್ ತಿಳಿಸಿಕೊಡುತ್ತದೆ.

ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರತಂದಿದ್ದು, ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಲಭ್ಯವಿದ್ದು ಗೂಗಲ್ ಪ್ಲೇಸ್ಟೋರ್‍ನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಬಹುದಾಗಿದೆ.

ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಯ ಮೀನುಗಾರರ ಮೊಬೈಲ್‍ಗಳಿಗೆ ಪ್ರಾಯೋಗಿಕವಾಗಿ ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮೊಬೈಲ್ ಆ್ಯಪ್ ಅಳವಡಿಸುತ್ತಿದೆ.

Also Read  ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

 

ವಿಶೇಷ ಅಂದ್ರೆ ಈ ಮೊಬೈಲ್ ಆ್ಯಪ್ ಸಮುದ್ರ ಮೇಲ್ಮಟ್ಟದಲ್ಲಿ ಮೀನುಗಳ ಲಭ್ಯತೆ ಇರುವುದನ್ನು ಗುರುತಿಸಿ ಅಪ್ಡೇಟ್ ಮಾಡುತ್ತದೆ. ಮೀನು ಲಭ್ಯವಿರುವ ಪ್ರದೇಶಕ್ಕೆ ಮೀನುಗಾರರು ನೇರವಾಗಿ ತೆರಳಿ ಬೇಟೆಯಾಡಬಹುದಾಗಿದ್ದು, ಸಮಯ, ಇಂಧನ ವ್ಯರ್ಥವಾಗುವುದು ತಪ್ಪುತ್ತದೆ. ಇದಲ್ಲದೆ ಸಮುದ್ರದಲ್ಲಿನ ಬದಲಾವಣೆಗಳು, ಚಂಡಮಾರುತ, ಸುನಾಮಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆಯನ್ನೂ ಜಿಪಿಎಸ್ ಮೂಲಕ ಕೊಡುತ್ತದೆ.

 

error: Content is protected !!
Scroll to Top