ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ➤ ಮುಂದಿನ 48 ಗಂಟೆಗಳ ಕಾಲ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತೆ ಸೀಲ್‌ಡೌನ್



(ನ್ಯೂಸ್ ಕಡಬ) newskadaba.com ಪುತ್ತೂರು :ಜು.21., ಕಿಲ್ಲರ್ ಕೊರೋನಾ ಮತ್ತೆ ನಗರ ಪೊಲೀಸ್ ಠಾಣೆಯನ್ನು ಆವರಿಸಿದ್ದು, ಮತ್ತಿಬ್ಬರು ಸಿಬಂದಿಗಳಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದೀಗ ಠಾಣೆಯನ್ನು ಮುಂದಿನ 48 ಗಂಟೆಗಳ ಕಾಲ ಮತ್ತೆ ಸೀಲ್‌ಡೌನ್ ಮಾಡಲಾಗಿದೆ.






ಸೋಮವಾರ ಬೆಳಿಗ್ಗೆ ನಗರ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಸಂಜೆಯ ವೇಳೆಗೆ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು ಇದರಿಂದಾಗಿ ಠಾಣೆಯ ಒಟ್ಟು 6 ಮಂದಿ ಸಿಬಂದಿಗಳು ಕೊರೋನಾ ಸೋಂಕಿತರಾಗಿರುವುದು ದೃಢವಾಗಿದೆ.ಈ ನಿಟ್ಟಿನಲ್ಲಿ ನಗರ ಪೊಲೀಸ್ ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.






error: Content is protected !!
Scroll to Top