(ನ್ಯೂಸ್ ಕಡಬ) newskadaba.com ಉಡುಪಿ :ಜು.21., ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ದಿನ ಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ಮಣ್ಣು ಹಾಗೂ ನೀರು ಸಂಗ್ರಹದ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ.
ಕೃಷ್ಣ ನಗರಿ ಉಡುಪಿಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಅದಮಾರು ಶ್ರೀ ಗಳಾದ ಈಶಪ್ರೀಯತೀರ್ಥ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿ, ಕೃಷ್ಣನ ಗಂಧ ಪ್ರಸಾದ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿ ಪವಿತ್ರ ಮಣ್ಣುನ್ನು ವಿಹಿಂಪ ಮುಖಂಡರಿಗೆ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಶ್ರೀ ಗಳು ಈ ತೀರ್ಥ ಮತ್ತು ಮಣ್ಣು ಆಗಸ್ಟ್ 5 ಮಂದಿರ ಶಿಲಾನ್ಯಾಸ ಸಂದರ್ಭ ಬಳಕೆಯಾಗಲಿದೆ. ರಾಮಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಡೆಯಲೆಂದು ಶುಭ ಹಾರೈಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.