ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ , ಜು.21: ತನ್ನ ಹದಿನಾರು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ಮೂಲದ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು, ಕಾಞಂಗಾಡ್ ನಲ್ಲಿ ಮತ್ತೊಂದು ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆಯೂ ಪೋಕ್ಸೋ ಕೇಸು ಸಹಿತ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು.

ಈತನ 16 ವರ್ಷದ ಮಗಳು ತನ್ನ ಮಾವನ ಸಹಕಾರದೊಂದಿಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಹಾಗೂ ಇತರ ಕೆಲವು ಮಂದಿಯೂ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾದ ಕುರಿತು ಮಾಹಿತಿ ನೀಡಿದ್ದಾಳೆ. ಈ ಹುಡುಗಿ ಗರ್ಭಿಣಿಯಾದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಉಸ್ತಾದ್ ಹಾಗೂ ಪರಿಸರದ ಮೂವರು ಯುವಕರನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಮಾಹಿತಿ ಗೊತ್ತಿದ್ದೂ ತಿಳಿಸದ ಹಿನ್ನೆಲೆಯಲ್ಲಿ ಹುಡುಗಿಯ ತಾಯಿಯ ಮೇಲೂ ಕೇಸು ದಾಖಲಾಗಿದೆ.

Also Read  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಗಳೂರು, ಇದರ ಸಹಯೋಗದೊಂದಿಗೆ ➤ ಜುಲೈ 15ರಂದು ಬೃಹತ್ ಉದ್ಯೋಗ ಮೇಳ

 

error: Content is protected !!
Scroll to Top