ಸುಳ್ಯ :ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ➤ ಗೂಸ ತಿಂದ ಮುಖಂಡ

(ನ್ಯೂಸ್ ಕಡಬ) newskadaba.com ಸುಳ್ಯ, ಜು.21:  ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡುತ್ತಿದ್ದ ಸಮಯದಲ್ಲಿ ಪಕ್ಷದ ಮುಖಂಡನೋರ್ವ ಧರ್ಮದೇಟು ತಿಂದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಿಂದ ವರದಿಯಾಗಿದೆ.

ಸುಳ್ಯ ಶಾಸಕರ ಮಾಜಿ ಆಪ್ತ ಕಾರ್ಯದರ್ಶಿ ಎನ್ನಲಾದ ಹಾಗೂ ಪಕ್ಷವೊಂದರಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೋರ್ವ ವಿವಾಹಿತ ಮಹಿಳೆಯೊಬ್ಬರ ಜತೆ ಇರುವುದನ್ನು ಕಂಡು ಆ ಮಹಿಳೆಯ ಪತಿಯ ಸಹೋದರ ಕೈಯಲ್ಲಿದ್ದ ದೊಣ್ಣೆಯಿಂದ ಅವರಿಗೆ ಬಾರಿಸಿದರೆಂದು ಗಾಯಗೊಂಡ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡರೆಂದು ಹೇಳಲಾಗಿದೆ.ಅನೈತಿಕ ಸಂಬಂಧದ ವಿರುದ್ಧ ಈ ಹಿಂದೆಯೂ ಹಲವು ಬಾರಿ ಇವರಿಗೆ ಎಚ್ಚರಿಕೆ ನೀಡಿದ್ದರೂ ಅದೆ ಚಾಳಿ ಮುಂದುವರಿಸಿದ್ದರು, ಇವರ ಸಲ್ಲಾಪದಿಂದ ರೋಸಿ ಹೋಗಿದ್ದ ಪತಿಯ ಸಹೋದರ, ಈ ಬಾರಿ ಇವರನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೋದಾಗ ತಪ್ಪಿಸಿ ಕೊಂಡಿದ್ದಾರೆ ಎನ್ನಲಾಗಿದೆ.

Also Read  ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ…

error: Content is protected !!
Scroll to Top