(ನ್ಯೂಸ್ ಕಡಬ) newskadaba.com ಸುಳ್ಯ ,ಜು.20: ಜಿಲ್ಲೆಯಲ್ಲಿ ಲಾಕ್ ಡೌನ್ ಮಧ್ಯೆಯೂ ಸೋಮವಾರ ಸುಳ್ಯ ನಗರದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿತ್ತು. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಲಾಕ್ ಡೌನ್ ಘೋಷಣೆಯ ಆರಂಭದ ದಿನಗಳಲ್ಲಿ ಜನಸಂದಣಿ ತೀರಾ ವಿರಳವಾಗಿತ್ತು. ಆದರೆ ಸೋಮವಾರ ಬೆಳಗ್ಗಿನಿಂದ 11 ಗಂಟೆಯ ತನಕ ಪೇಟೆಯಲ್ಲಿ ಜನ ಸಂದಣಿ ಅಧಿಕವಾಗಿತ್ತು.
ದಿನಸಿ, ತರಕಾರಿ ಅಂಗಡಿಗಳ ಮುಂದೆ ಮತ್ತು ಮೆಡಿಕಲ್ ಶಾಪ್ ಎದುರಿನಲ್ಲಿ ಜನ ದಟ್ಟಣೆ ಉಂಟಾಗಿತ್ತು. ವಾಹನ ಸಂಚಾರವೂ ಅಧಿಕವಾಗಿತ್ತು. 11 ಗಂಟೆಗೆ ಪೊಲೀಸ್ ವಾಹನದ ಸೈರನ್ ಮೊಳಗುತ್ತಿದ್ದಂತೆ ಅಂಗಡಿಗಳು ಬಾಗಿಲು ಮುಚ್ಚಿದವು. ಬೆಳ್ಳಾರೆ ಪೇಟೆಯಲ್ಲಿಯೂ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ರಶ್ ಉಂಟಾಗಿದ್ದು ಪೇಟೆಯಲ್ಲಿ ಜನ ಸಂಚಾರ ಮತ್ತು ವಾಹನ ದಟ್ಟಣೆ ಅಧಿಕ ಇತ್ತು.