ಉಳ್ಳಾಲ: ಕಡಲ್ಕೊರೆತಕ್ಕೆ ಕೊಚ್ಚಿ ಹೋದ ರಸ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು 20:ಕರಾವಳಿಯಲ್ಲಿ ಮಳೆರಾಯನ ಅಬ್ಬರ ಹೆಚ್ಚುತ್ತಲೆ ಇದೆ. ಇದರಿಂದಾಗಿಕರಾವಳಿಯಲ್ಲಿ ಹವಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಭಾರೀ ಮಳೆಯಾಗುತ್ತಿದ್ದು ಕಡಲಿನ ಅಬ್ಬರವೂ ಅಧಿಕವಾಗಿದೆ. ಉಳ್ಳಾಲದ ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದ್ದು ಉಚ್ಚಿಲದಲ್ಲಿ ರಸ್ತೆ ಕಡಿತವಾಗಿದೆ.ಕಡಲ ತೀರದ ಜನರು ಆತಂಕಕ್ಕೆ ಒಳಗಾಗಿದ್ದು ಉಚ್ಚಿಲದಲ್ಲಿ ರಸ್ತೆ ಕಡಲ್ಕೊರೆತದಿಂದಾಗಿ ಕಡಿತವಾದ ಕಾರಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಡಲ ಕೊರೆತದಿಂದಾಗಿ ಹಲವು ಮನೆಗಳು ಅಪಾಯದಲ್ಲಿದ್ದು ಆತಕಂಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Also Read  ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ► ಸಾರ್ವಜನಿಕವಾಗಿ ಅಬ್ಬರಿಸಿದ ವೀಡಿಯೋ ವೈರಲ್

error: Content is protected !!
Scroll to Top