ದೇಶದಲ್ಲಿ 11 ಲಕ್ಷ ಗಡಿ ದಾಟಿದ ಕೊರೋನಾ ಕೇಸ್.. !!!

(ನ್ಯೂಸ್ ಕಡಬ) newskadaba.com ಮಂಗಳೂರು :ಜು.20.,
ಬೆಂಗಳೂರು: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 40,425 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕದ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 11 ಲಕ್ಷ ದಾಟಿದೆ.


ಸೋಂಕಿನಿಂದ ಒಂದು ದಿನದಲ್ಲಿ ದೇಶದಾದ್ಯಂತ 681 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ದೇಶದಲ್ಲಿ 3,90,459 ಸಕ್ರಿಯ ಪ್ರಕರಣಗಳಿದ್ದು, 7,00,087 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು 11,18,043 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 27,497 ಮಂದಿ ಸೋಂಕಿನ ಕಾರಣಗಳಿಂದ ಮೃತಪಟ್ಟಿದ್ದಾರೆ.


ಜುಲೈ 19ರ ವರೆಗೂ 1,40,47,908 ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಐಸಿಎಂಆರ್‌ ಹೇಳಿದೆ. ಭಾನುವಾರ ಒಂದೇ ದಿನ 2,56,039 ಮಾದರಿಗಳ ಪರೀಕ್ಷೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 3,10,455 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 11,854 ಮಂದಿ ಮೃತಪಟ್ಟಿದ್ದಾರೆ. 1,29,032 ಸಕ್ರಿಯ ಪ್ರಕರಣಗಳಿದ್ದು, 1,69,569 ಮಂದಿ ಗುಣಮುಖರಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ 16,031 ಸಕ್ರಿಯ ಪ್ರಕರಣಗಳಿದ್ದು, 1,03,134 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,22,793 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 3,628 ಮಂದಿ ಮೃತಪಟ್ಟಿದ್ದಾರೆ.

Also Read  ದುರಂತ ಭೂಮಿಯಾದ ವಯನಾಡು...! ಮೃತರ ಸಂಖ್ಯೆ ಏರಿಕೆ


ತಮಿಳುನಾಡಿನಲ್ಲಿ 50,297 ಸಕ್ರಿಯ ಪ್ರಕರಣಗಳಿದ್ದು, 1,17,915 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,70,693 ಕೋವಿಡ್‌ ಪ್ರಕರಣಗಳ ಪೈಕಿ 2,481 ಮಂದಿ ಸಾವಿಗೀಡಾಗಿದ್ದಾರೆ.


ರವಿವಾರ ದಕ್ಷಿಣ ಕನ್ನಡದಲ್ಲಿ 285, ಉಡುಪಿಯಲ್ಲಿ 134, ಉತ್ತರ ಕನ್ನಡದಲ್ಲಿ 69 ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ ಬರೊಬ್ಬರಿ 4120 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವದ್ದು, ಒಟ್ಟು 63772ಕ್ಕೆ ಏರಿಕೆಯಾಗಿದೆ. ಒಂದೇ ದಿನ 1290 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 23065 ಗುಣಮುಖರಾಗಿದ್ದಾರೆ. ಜುಲೈ 19ರ ವರೆಗೆ ಬರೊಬ್ಬರಿ 91 ಜನರು ಕೋವಿಡ್-19ನಿಂದ ಬಲಿಯಾಗಿದ್ದಾರೆ.

error: Content is protected !!
Scroll to Top