ಕುವೈಟ್ ಸಮುದ್ರದಲ್ಲಿ ಪ್ರಾಣ ರಕ್ಷಣೆಗೆ ಧಾವಿಸಿ ಪ್ರಾಣ ಕಳೆದುಕೊಂಡ ಮಂಗಳೂರಿನ ಯುವಕ 

(ನ್ಯೂಸ್ ಕಡಬ) newskadaba.com ಮಂಗಳೂರು :ಜು.20., ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೊಬ್ಬನ ಪ್ರಾಣ ರಕ್ಷಣೆಗೆ ಧಾವಿಸಿ ಮಂಗಳೂರಿನ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಗಲ್ಫ್ ರಾಷ್ಟ್ರ ಕುವೈಟ್ ರಾಷ್ಟ್ರದಲ್ಲಿ ಸಂಭವಿಸಿದೆ.


ಕಳೆದ ಒಂದೂವರೆ ವರುಷದಿಂದ ಕುವೈಟ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ, ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ.
ಶನಿವಾರ ಸಂಜೆ ಕುವೈಟ್ ನ ಸಾಲ್ಮಿಯಾ ಬೀಚ್ ಗೆ ತನ್ನ ಸ್ನೇಹಿತರ ಜೊತೆಗೂಡಿ ಈಜಲೆಂದು ತೆರಳಿದ್ದರು. ತಮ್ಮ ಈಜು ಮುಗಿಸಿ ದಡ ಸೇರುತ್ತಿದ್ದಂತೆ ಈಜಿಪ್ಟ್ ನ ನಾಗರಿಕನೊಬ್ಬ ಸಮುದ್ರ ಮಧ್ಯೆಯಿಂದ ರಕ್ಷಣೆಗಾಗಿ ಕೂಗುತ್ತಿದ್ದರು ಇದನ್ನ ಕಂಡ ತಕ್ಷಣವೇ ಅನೀಸ್, ಮತ್ತೆ ವಾಪಾಸ್ ಸಮುದ್ರಕ್ಕೆ ಹಾರಿ ಆತನ ರಕ್ಷಣೆಗೆ ಮುಂದಾಗಿದ್ದಾರೆ.

Also Read  ಗುತ್ತಿಗಾರು :ಮತಯಾಚಿಸಲು ಬರಬೇಡಿ ಎಂದು ಗೇಟಿಗೆ ಬೋರ್ಡ್ ➤ಮತದಾರನ ಬೋರ್ಡ್ ನೋಡಿ ಕಂಗಾಲದ ಅಭ್ಯರ್ಥಿಗಳು


ದುರಾದೃಷ್ಟವಶಾತ್, ಸಮುದ್ರದ ಅಲೆಗೆ ಸಿಕ್ಕ ವ್ಯಕ್ತಿಯನ್ನ ಸಂಕಷ್ಟದಿಂದ ಪಾರು ಮಾಡಿದರೂ, ರಕ್ಷಿಸಲು ಹೋದ ಅನೀಸ್ ಮಾತ್ರ ಸ್ನೇಹಿತರ ಕಣ್ಣೆದುರೇ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಘಟನೆ ಶನಿವಾರ ಸಂಜೆ ಭಾರತೀಯ ಕಾಲಮಾನ ರಾತ್ರಿ 8.30 ಸಮಯಕ್ಕೆ ನಡೆದಿದ್ದು, ಕುವೈಟ್ ನ ನೇವಿ ಹಾಗೂ ಕೋಸ್ಟ್ ಗಾರ್ಡ್ ನಿರಂತರ ಹುಡುಕಾಟದ ಬಳಿಕ ರವಿವಾರ ಮೃತದೇಹ ಪತ್ತೆಯಾಗಿದೆ.


29ರ ಹರೆಯದ ಅನೀಸ್ ಯಾವಾಗಲೂ ಪರೋಪಕಾರಿ ಸ್ವಭಾವದವನಾಗಿದ್ದು, ಊರಲ್ಲಿರುವಾಗಲೂ ಕಷ್ಟದಲ್ಲಿದ್ದವರ ಸಹಾಯಕ್ಕೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವವನಾಗಿದ್ದ.

error: Content is protected !!
Scroll to Top