ದ.ಕ. ಜಿಲ್ಲೆಯಲ್ಲಿ ಮತ್ತೆ 285 ಮಂದಿಯಲ್ಲಿ ಸೋಂಕು – ಇಬ್ಬರು ಮೃತ್ಯು  



(ನ್ಯೂಸ್ ಕಡಬ) newskadaba ಮಂಗಳೂರು, ಜು. 20: ದ.ಕ. ಜಿಲ್ಲೆಯಲ್ಲಿ ರವಿವಾರದಂದು  285 ಮಂದಿಯಲ್ಲಿ ಸೋಂಕು  ಪತ್ತೆಯಾಗಿದೆ . ಹಾಗೂ ಇಬ್ಬರು ಬಲಿಯಾಗಿದ್ದಾರೆ.   ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3596ಕ್ಕೆ ಏರಿಕೆಯಾಗಿದೆ.ಜಿಲ್ಲಾಡಳಿತ ನೀಡಿರುವ ವರದಿಯ ಪ್ರಕಾರ ಜಿಲ್ಲೆಯಲ್ಲಿ ಸದ್ಯ 2028 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.





ಇನ್ನು ರವಿವಾರದಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಮಂಗಳೂರು ಮೂಲದ 77 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಅವರು ಕ್ಯಾನ್ಸರ್, ಅಸ್ತಮಾದಿಂದ ಬಳಲುತ್ತಿದ್ದ ಬಳಲುತ್ತಿದ್ದರು. ಜುಲೈ 9ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 18ರಂದು ಅವರು ಮೃತಪಟ್ಟಿದ್ದರು. ಇದೀಗ ಅವರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಹಾಗೂ ಮಂಗಳೂರು ಮೂಲದ 53 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.






 

 

error: Content is protected !!
Scroll to Top