NMPT ಯ 13 ಮಂದಿ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ➤ ಬಂದರು ಕಾರ್ಯಕ್ಕೆ ಅಡ್ಡಿ..!

(ನ್ಯೂಸ್ ಕಡಬ) newskadaba.com ಮಂಗಳೂರು :ಜು.19., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಲಾಕ್‌ ಡೌನ್ ಘೊಷಣೆ ಮಾಡಿ ರಾಪಿಡ್‌ ಟೆಸ್ಟ್‌ ಆರಂಭಿಸಿದೆ. ಈ ಮಧ್ಯೆ ರಾಜ್ಯದ ಪ್ರಮುಖ ವಾಣಿಜ್ಯ ಬಂದರು ಎನ್ ಎಂಪಿಟಿಗೂ ಕೊರೊನಾ ಸೋಂಕಿನ ಬಿಸಿ ತಟ್ಟಿದ್ದು ಇಲ್ಲಿನ 13 ಮಂದಿ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಸೋಂಕು ಧೃಡಪಟ್ಟಿದೆ.

ಇದರಿಂದ ಮಂಗಳೂರು ಬಂದರಿನ ಆಮದು-ರಫ್ತು ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಬಂದರಿನ ರಿಸ್ಟಾಕರ್, ಕ್ರೇನ್ ಮತ್ತು ಅಗ್ನಿಶಾಮಕ ವಿಭಾಗದ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಪ್ರಾಥಮಿಕ ಸಂಪರ್ಕದವರೂ ಕ್ವಾರೆಂಟೈನ್ ಆಗಿದ್ದರಿಂದ ಕಂಟೈನರ್ ಗಳನ್ನು ಹಡಗಿನಿಂದ ಟ್ರಕ್ ಗೆ ಲೋಡ್ ಮಾಡಲು ಸಿಬ್ಬಂದಿ ಕೊರತೆ ಉಂಟಾಗಿದೆ.

error: Content is protected !!
Scroll to Top