ದ.ಕನ್ನಡದಲ್ಲಿ ಸಂಡೇ ಲಾಕ್ ಡೌನ್ ಹಿನ್ನೆಲೆ : ಸಂಪೂರ್ಣ ಸ್ಥಬ್ಧವಾದ ಕಡಬ ವಲಯ

(ನ್ಯೂಸ್ ಕಡಬ ) newskadaba ಕಡಬ, ಜು.19: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ ಡೌನ್ ವಿಧಿಸಿದ್ದರೂ ಇಂದು ಭಾನುವಾರದ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗಾಗಿ ಇಂದು ಕಡಬ  ಮುಂಜಾನೆಯಿಂದಲೇ ಜಿಲ್ಲೆ ಬಹುತೇಕ ಸ್ಥಬ್ದವಾಗಿದೆ.

 

ಕಡಬದಲ್ಲಿ , ಮೆಡಿಕಲ್, ತುರ್ತು ಸೇವಾ ಕೇಂದ್ರಗಳಿಗಷ್ಟೇ ವಿನಾಯತಿ ನೀಡಲಾಗಿದೆ. ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು .

ಲಾಕ್ ಡೌನ್ ಇದ್ದರೂ ಬೆಳಿಗ್ಗೆ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಅದಕ್ಕೆ ಅನುಮತಿ ನೀಡಲಾಗಿಲ್ಲ. ಬೆಳಿಗ್ಗೆ 11ರ ವರೆಗೆ ಹಾಲು ಖರೀದಿಗೆ ಅವಕಾಶ ನೀಡಲಾಗಿದೆ.ಮಂಗಳೂರು ನಗರ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದ್ದು, ನಗರದ ಹಲವೆಡೆಬಂದೋಬಸ್ತು ಮಾಡಲಾಗಿದೆ.

Also Read  ಪೋಕ್ಸೋ ಪ್ರಕರಣ- ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ಏಕಸದಸ್ಯ ಪೀಠ ತಾತ್ಕಾಲಿಕ ರಿಲೀಫ್

 

 

 

error: Content is protected !!
Scroll to Top