ಸುಳ್ಯದ ನಾರಿಗೆ ಒಲಿದ ಮಿಸೆಸ್ ಕರ್ನಾಟಕ -2020 ಕಿರೀಟ

(ನ್ಯೂಸ್ ಕಡಬ) newskadaba.com ಸುಳ್ಯ,ಜು.19 : ಮಿಸೆಸ್ ಕರ್ನಾಟಕ -2020 ಕಿರೀಟವನ್ನು ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಅವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಸುಳ್ಯದ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ,ಎಸ್ ಅವರು ಮಿಸೆಸ್ ಕರ್ನಾಟಕ -2020 ಆಗಿ ಆಯ್ಕೆಯಾಗಿದ್ದು, ಸೌಂದರ್ಯ ಸ್ಪರ್ಧೆಯಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರಿನ ಆರ್. ಆರ್ ಗ್ರೂಪ್ಸ್ ಪ್ರತಿ ವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ವರ್ಷದ ಕಿರೀಟವನ್ನು ಸುಳ್ಯದ ಸುಪ್ರೀತ ಕೆ, ಎಸ್ ಗೆದ್ದುಕೊಂಡಿದ್ದಾರೆ. ಜು. 11ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿದ್ದು, ಗೆದ್ದ ಸುಪ್ರೀತಾವರಿಗೆ ಆರ್. ಆರ್.ಗ್ರೂಪ್ಸ್ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.
ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ. ಸುರೇಶ್ -ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಸುಪ್ರೀತಾರವರು ಉಡುಪಿಯಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ,ಬಿ.ಎಂ ಪದವಿ ಪಡೆದು, ಬಳಿಕ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಗೊಂಡರು. 8ವರ್ಷದ ಇಶಾನ್ ತಾಯಿಯಾಗಿರುವ ಸುಪ್ರೀತಾರವರು ಈಗ ಯಕ್ಷಗಾನ ಅಭ್ಯಾಸದಲ್ಲಿ ತೊಡಗಿದ್ದಾರೆ.

Also Read  ಸುಳ್ಯ: ಕಾರು ಮತ್ತು ಸ್ಕೂಟಿ ನಡುವೆ ಢಿಕ್ಕಿ ➤‌ ಅಣ್ಣ, ತಂಗಿ ಮೃತ್ಯು

 

 

 

error: Content is protected !!
Scroll to Top