(ನ್ಯೂಸ್ ಕಡಬ) newskadaba.com ಪುತ್ತೂರು, :,ಜು.19.ಕೊರೊನ ಪೀಡಿತವಾಗಿದ್ದ ಪುತ್ತೂರಿನ ಎರಡು ತಿಂಗಳ ಮಗು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಆದರೆ ಫಲಕಾರಿಯಾಗದೇ ಮಗು ಶನಿವಾರ ಸಾವನ್ನಪ್ಪಿದೆ.
ಈ ಹಿನ್ನೆಲೆಯಲ್ಲಿ ಮಗುವಿನ ಮೃತ ದೇಹವನ್ನು ದೂರದ ಪುತ್ತೂರಿಗೆ ಕೊಂಡು ಹೋಗಿ ದಫನ ಮಾಡಲು ತಾಂತ್ರಿಕ ಅಡಚಣೆಗಳು ಎದುರಾದ ಹಿನ್ನೆಲೆಯಲ್ಲಿ ಮಗುವಿನ ಹೆತ್ತವರಿಗೆ ಏನು ಮಾಡಬೇಕೆಂದು ಧಿಕ್ಕೇ ತೋಚದಂತಾಗಿತ್ತು.
ಇದರ ಮಾಹಿತಿ ಪಡೆದ ಭಜರಂಗ ದಳದ ಕಾರ್ಯಕರ್ತರು ಮುಂದಾಳತ್ವ ವಹಿಸಿ ಮಂಗಳೂರಿನಲ್ಲೇ ಅಂತ್ಯ ಕ್ರೀಯೆ ನಡೆಸಲು ಮುಂದಾದರು.
ನಂದಿಗುಡ್ಡೆ ಸ್ಮಶಾನದಲ್ಲಿ ಕೋವಿಡ್ ನಿಯಾವಳಿಗಳ ಪ್ರಕಾರ ಪಿಪಿಇ ಕಿಟ್ ಧರಿಸಿ ಕಾರ್ಯಕರ್ತರು ಮಗುವಿನ ಅಂತ್ಯಸಂಸ್ಕಾರವನ್ನು ನೆರವೇರಿಸಿ ಕೊಟ್ಟಿದ್ದಾರೆ.