ಹಿರಿಯ ತುಳುಭಾಷ ವಿದ್ವಾಂಸಕ ಯು.ಪಿ ಉಪಾಧ್ಯಾಯ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಉಡುಪಿ ,ಜು.18: ಹಿರಿಯ ಭಾಷಾ ವಿಜ್ಷಾನಿ ತುಳು ವಿದ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಅವರು (85) ಶುಕ್ರವಾರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದಿರ್ಘಕಾಲದ ಅನಾರೋಗ್ಯದದಿಂದ ಬಳಲುತ್ತಿದ್ದ ಉಪಾದ್ಯಾಯರು ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

 


ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಯು. ಪಿ ಉಪಾಧ್ಯಾಯರು ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿದ್ದರು. ಈ ಯೋಜನೆಯಲ್ಲಿ ಆರು ಸಂಪುಟಗಳ ತುಳು ನಿಘಂಟು ಹೊರತಂದಿದ್ದರು.2014 ರಲ್ಲಿ ನಿಧನರಾಗಿದ್ದ ಇವರ ಪತ್ನಿ ಸುಶೀಲಾ ಪಿ ಉಪಾಧ್ಯಾಯರವರು ಕೂಡ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಭಾಷೆ, ಜಾನಪದ ಸಂಸ್ಕೃತಿಯ ಕುರಿತಾಗಿ ಬಹಳಷ್ಟು ಸಂಶೋಧನೆ ನಡೆಸಿದ್ದಾರೆ. ಭಾಷಾ ಸಂಶೋಧನೆಯ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದ ಉಪಾಧ್ಯಾಯರು ಆಫ್ರಿಕಾ ದೇಶಗಳಿಗೆ ತೆರಳಿ ಜಾನಪದ ಭಾಷೆಗಳ ಕುರಿತು ಅಧ್ಯಯನ ನಡೆಸಿದ್ದರು.ಸೇಡಿಯಾಪು ಕೃಷ್ಣ ಭಟ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಯು. ಪಿ ಉಪಾಧ್ಯಾಯರು ಪಾತ್ರರಾಗಿದ್ದರು.

Also Read  ನಂಬಿ ಬರುತ್ತಿರುವ ದಲಿತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ - ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ

 

error: Content is protected !!
Scroll to Top