ಕುಮಾರಧಾರೆಯಲ್ಲಿ ನೀರಿನ ಮಟ್ಟ ಹೆಚ್ಚಳ ➤ ಸ್ನಾನಘಟ್ಟ ಜಲಾವೃತ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜು.18: ಮಳೆಗಾಲ ಆರಂಭವಾಗಿದ್ದು ಕರಾವಳಿಯಲ್ಲಿ ಕೊರೋನಾ ವೈರಸ್ ಜೊತೆಗೆ ಮಳೆರಾಯಣ ಅಬ್ಬರವು ಹೆಚ್ಚುತ್ತಿದೆ. ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದೆ, ಈಗಾಗಳೇ ಅಲ್ಲಲ್ಲ ಹಾನಿಗಳೂ ಆಗಿವೆ, ಕಡಬ ವಲಯದಲ್ಲಿ ಕೆಲವೆಡೆ ಗುಡ್ಡಗಳು ಕುಸಿದಿದೆ. ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ, ಕುಮಾರಧಾರ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಕರಾವಳಿಯಲ್ಲಿ ಕಳೆಂದೊಂದು ವಾರದಿಂದ ವರುಣ ಅಬ್ಬರ ಹೆಚ್ಚಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಾದ್ಯಂತ ನಿನ್ನೆಯಿಂದ ಮಳೆ ಹೆಚ್ಚಳವಾಗಿದ್ದು, ಪರಿಣಾಮ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.  ನಿನ್ನೆಯಿಂದ ನೀರಿನ ಪ್ರಮಾಣ ಏರುತ್ತಿದ್ದು ಇಂದು ಕುಮಾರಧಾರ ಕಿಂಡಿ ಅಣೆಕಟ್ಟು ಮುಚ್ಚುವ ಹಂತಕ್ಕೆ ನೀರಿನ ಮಟ್ಟದಲ್ಲಿ ಏರಿಕೇಯಾಗಿದೆ. ಸ್ನಾನ ಘಟ್ಟ ಸಂಪೂರ್ಣವಾಗಿ ಕಳೆದ ದಿನ ಜಲಾವೃತವಾಗಿದ್ದು ಸ್ನಾನ ಘಟ್ಟದ ಮೆಟ್ಟಿಲಿನವರೆಗೆ ನೀರು ತುಂಬಿಕೊಂಡಿದೆ. ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು, ಶಂಭೂರು ಅಣೆಕಟ್ಟಿನ ಲೆಕ್ಕಾಚಾರದಂತೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

Also Read  ನರ್ಸಿಂಗ್ ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಪ್ರಾಧಿಕಾರ ರಚನೆ

error: Content is protected !!
Scroll to Top