ಗಂಗೊಳ್ಳಿ : ಮಳೆಗೆ ಮನೆ ಕುಸಿದು ಬಿದ್ದು ಲಕ್ಷಾಂತರ ರೂ. ಹಾನಿ

(ನ್ಯೂಸ್ ಕಡಬ) newskadaba.com ಗಂಗೊಳ್ಳಿ ,ಜು.18: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಂಗೊಳ್ಳಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.ಗಂಗೊಳ್ಳಿ ಗ್ರಾಮದ ಮೇಲ್‍ಗಂಗೊಳ್ಳಿ ರಾಮ ಪೈ ಮಠದ ಬಳಿಯ ನಿವಾಸಿ ಮುಕುಂದ ನಾಯಕ್ ಎಂಬುವರ ವಾಸ್ತವ್ಯದ ಮನೆ ಭಾರೀ ಮಳೆಗೆ ಗುರುವಾರ ರಾತ್ರಿ ಸಂಪೂರ್ಣವಾಗಿ ನೆಲಕಚ್ಚಿದೆ  .

 

ಬೆಲೆ ಬಾಳುವ ವಸ್ತುಗಳು, ಪೀಠೋಪಕರಣ ಸಹಿತ ಇನ್ನಿತರ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿ ಹಾನಿಗೊಳಗಾಗಿದೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಮುರಿದು ಬೀಳುತ್ತಿರುವ ಸದ್ದು ಕೇಳುತ್ತಿದ್ದಂತೆಯೇ ಮನೆಯಲ್ಲಿದ್ದ ಮುಕುಂದ ನಾಯಕ್, ಅವರ ತಾಯಿ, ತಂಗಿ ಮತ್ತು ತಮ್ಮ ಮನೆಯಿಂದ ಓಡಿ ಹೋಗಿದ್ದರಿಂದ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಇಡೀ ಮನೆ ನೆಲಕಚ್ಚಿದೆ .

Also Read  ಪುತ್ತೂರು: ಪೊಲೀಸ್ ಠಾಣೆಯ ಬಳಿಯಿಟ್ಟ ದ್ವಿಚಕ್ರ ವಾಹನ ಕಳವು

 

 

error: Content is protected !!
Scroll to Top