ನೀರಿನ ಹೊಂಡಕ್ಕೆ ಬಿದ್ದ ಕರುವಿನ ರಕ್ಷಣೆ ➤ ಯುವಕನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.16: ನೀರಿನ ಹೊಂಡಕ್ಕೆ ಬಿದ್ದು ಜೀವಣ್ಮರಣ ಸ್ಥಿತಿಯಲ್ಲಿದ್ದ ಕರುವೊಂದನ್ನು ದಾರಿಹೋಕರೊಬ್ಬರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮಂಗಳೂರು ಹೊರವಲಯದ ತಣ್ಣೀರುಬಾವಿ ಬೀಚ್ ಗೆ ಹೋಗುವ ರಸ್ತೆ ಬದಿಯಲ್ಲಿ ಈ ಘಟನೆ ನಡೆದಿದೆ.

ಗುತ್ತಿಗೆ ಕಾರ್ಮಿಕರು ತೋಡಿದ ಗುಂಡಿಗೆ ಕರುವೊಂದು ಬಿದ್ದಿತ್ತು, ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ನಿಖಿಲ್ ಪೂಜಾರಿ ಈ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿ ನೀರು ತುಂಬಿದ ಹೊಂಡಕ್ಕೆ ಇಳಿದು ಒದ್ದಾಡುತ್ತಿದ್ದ ಕರುವನ್ನ ಮೇಲೆಕೆತ್ತಿ ರಕ್ಷಣೆ ಮಾಡಿದ್ದಾರೆ.ಇವರಿಗೆ ಸ್ಥಳೀಯ ಯುವಕರು , ಅಗ್ನಿ ಶಾಮಕ ದಳದವರು ಸಹಕರಿಸಿದ್ದಾರೆ. ಕರುವಿಗೆ ಮರು ಜೀವ ಕೊಟ್ಟ ನಿಖಿಲ್ ಪೂಜಾರಿ ಗೆ ಹಾಗೂ ಸ್ಥಳೀಯ ಯುವಕರ ಗೋ ಪ್ರೇಮಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Also Read  ಹಿಂದಿನ ನಿಯಮಗಳನ್ನು ಅನುಸರಿಸುವಂತೆ ಆಗ್ರಹ   ಎನ್ ಎಸ್ ಯುಐ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

 

error: Content is protected !!
Scroll to Top