ಕಾಣಿಯೂರಿನ ಯುವಕನಲ್ಲಿ ಕೊರೋನಾ ದೃಢ ➤ ಯುವಕ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಾಣಿಯೂರು ,ಜು.16: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತ ತೆರಳಿದ್ದ ಕಾಣಿಯೂರಿನ ಖಾಸಗಿ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಯುವಕ ಮಂಗಳೂರಿನ ಆಹಾರ ತಯಾರಿಕೆಯ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆತನಿಗೆ ಆರೋಗ್ಯ ಸಮಸ್ಯೆ ಬಂದಿದ್ದರಿಂದ ಕಾಣಿಯೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ರಕ್ತ ಪರೀಕ್ಷಾ ಲ್ಯಾಬ್ ತೆರಳಿದ್ದಾರೆ.ಬಳಿಕ ಯುವಕ ಕಾಣಿಯೂರು ಪೇಟೆಯಲ್ಲಿರುವ ಹಲವು ಅಂಗಡಿಗಳಿಗೆ ಹಾಗೂ ಬ್ಯಾಂಕ್ ಗಳಿಗೆ ತೆರಳಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

Also Read  ಎಲೆಕ್ಟ್ರಾನಿಕ್ಸ್ ಶೋ ರೂಮ್ ನಲ್ಲಿ ಅಗ್ನಿ ಅವಘಡ

 

error: Content is protected !!
Scroll to Top