ಗುಡಿಸಲಲ್ಲಿ ವಾಸವಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ ಹಸ್ತಾಂತರ ➤ ವೀರಕೇಸರಿ ಮತ್ತು ಸ್ಪಂದನ ಸೇವಾ ಸಂಘದಿಂದ ಮನೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಪಟ್ರಮೆ ,ಜು.16: ವೀರಕೇಸರಿ ಸಂಘಟನೆ ಅನಾರು, ಪಟ್ರಮೆ ಹಾಗೂ ಸ್ಪಂದನ ಸೇವಾ ಸಂಘ ಬೆಳ್ತಂಗಡಿ ಹಾಗೂ ಊರಿನ ಸಹೃದಯಿಗಳ ಸಹಾಯದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬವೊಂದಕ್ಕೆ, 2 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟ ಪ್ರಶಂಶನೀಯ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮೈಕೆ ಎಂಬಲ್ಲಿ ನಡೆದಿದೆ.

 

ಕಳೆದ ಹಲವಾರು ವರ್ಷಗಳಿಂದ ಗಿರಿಜ ಎಂಬುವರು ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ ನಿರ್ಗತಿಕರಂತೆ ಗುಡಿಸಲಲ್ಲಿ ವಾಸಮಾಡುತ್ತಿದ್ದರು. ಇವರ ಕಷ್ಟವನ್ನು ಗಮನಿಸಿದ ವೀರಕೇಸರಿ ಸಂಘಟನೆ ಹಾಗೂ ಸ್ಪಂದನ ಸೇವಾ ಸಂಘ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ವಾಸಿಸಲು ಯೋಗ್ಯವಾದ ಮತ್ತು ಎಲ್ಲ ಮೂಲಭೂತ ಸೌಕರ್ಯಗಳು ಕೂಡಿರುವ “ಸಮೃದ್ದಿ ನಿಲಯ” ವನ್ನು ಗೃಹ ಪ್ರವೇಶ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಜಿರೆ ಸಂಘ ಚಾಲಕರಾದ ಕೃಷ್ನ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ್ ರವರು ಭಾಗವಹಿಸಿ ಗಿರಿಜ ರ ಕುಟುಂಬಕ್ಕೆ ನೂತನ ಮನೆಯ ಕೀ ಹಸ್ತಾಂತರ ಮಾಡಿದರು.

Also Read  ಕೌಡಿಚಾರು: ಬೈಕ್ ಅಪಘಾತ ➤ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು

 

 

error: Content is protected !!
Scroll to Top