ಕಡಬ ತಾಲೂಕಿನಲ್ಲಿ ಲಾಕ್‍ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

(ನ್ಯೂಸ್ ಕಡಬ) newskadaba.com ಕಡಬ,ಜು.16: ಮಾನವ ಸಂಕುಲಕ್ಕೆ ಮೃತ್ಯುವಾಗಿ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ತನ್ನ ವರಸೆಯನ್ನೆ  ಬದಲಾಯಿಸುತ್ತಿದೆ. ಮಿತಿ ಮೀರಿ ಹಬ್ಬುತ್ತಿರುವ ಕೊರೋನಾ ಸೊಂಕಿನಿಂದಾಗಿ, ರಾಜ್ಯ ಸರ್ಕಾರ ಮುಂದಿನ 7 ದಿನಗಳ ಕಾಲ ಲಾಕ್ ಡೌನ್ ಆದೇಶ ಹೊರಡಿಸಿದೆ. ಲಾಕ್ ಡೌನ್ ನ ಮೊದಲ ದಿನವಾದ ಇಂದು ಕಡಬ ತಾಲೂಕು ವ್ಯಾಪ್ತಿಯಲ್ಲಿ ಹಾಲು, ಮೆಡಿಕಲ್ , ಆಸ್ಪತ್ರೆ, ತರಕಾರಿ, ಅಗತ್ಯ ವಸ್ತುಗಳ ಅಂಗಡಿಗಳು, ಪತ್ರಿಕೆ ಬಿಟ್ಟು ಉಳಿದೆಲ್ಲಾ ವ್ಯವಹಾರದ ಅಂಗಡಿಗಳು ಸ್ಥಗಿತಗೊಂಡಿತ್ತು.

 

ಮುಂಜಾನೆ ಬೆರಳೆಣಿಕೆ ವಾಹನಗಳು ಮತ್ತು ಸಾರ್ವಜನಿಕರ ಓಡಾಟವಿತ್ತು. ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳು ತೆರೆದಿದ್ದರೂ ಬೆಳ್ಳಿಗೆ ಗಂಟೆ ಹನ್ನೊಂದು ಆಗುತ್ತಿದ್ದಂತೆ ಅವೆಲ್ಲವೂ ಬಂದ್ ಆಗಿತ್ತು. ಹಾಲು, ಮೆಡಿಕಲ್ ಶಾಪ್ ಗಳು, ಪತ್ರಿಕಾ ವಿತರಣಾ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು. ಕಡಬ ವಲಯದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಹರೆ ನೀಡುತ್ತಿದ್ದಾರೆ. ನಗರದ ಪ್ರಮುಖ ಮಾತ್ರವಲ್ಲದೆ ಒಳ ರಸ್ತೆಗಳೂ ಬಹುತೇಕ ನಿರ್ಜನವಾಗಿತ್ತು. ಕೆಲವೊಂದು ಸರಕು ಸಾಗಾಣಿಕೆಯ ವಾಹನ ಓಡಾಟ ಕಾಣುತ್ತಿತ್ತು. ಇನ್ನು ಕಡಬ, ಮರ್ಧಾಳ, ನೆಟ್ಟಣ, ಬಿಳಿನೆಲೆ, ಸವಣೂರು, ಪಂಜ, ಬೆಳ್ಳಾರೆ, ಸೇರಿದಂತೆ ಹಲವೆಡೆ ಹನ್ನೊಂದು ಗಂಟೆಯ ಬಳಿಕ ಸಂಪೂರ್ಣ ಬಂದ್ ಆಗಿದೆ. ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ಪೊಲೀಸರು, ಕಡಬ ವ್ಯಾಪ್ತಿಯಲ್ಲಿ ಕಡಬ ಪೊಲೀಸರು ಲಾಕ್ ಡೌನ್ ಯಶಸ್ವಿ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Also Read  ಕಡಬ ಪೊಲೀಸ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳಿಂದ ದಲಿತ ವಿರೋಧಿ ನೀತಿಯ ಆರೋಪ ► ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

 

 

 

error: Content is protected !!
Scroll to Top